Site icon Suddi Belthangady

ದ.ಕ. ಲೋಕಸಭಾ ಕ್ಷೇತ್ರದಲ್ಲಿ ಅರಳಿದ ಕಮಲ- ಕ್ಯಾ. ಬ್ರಿಜೇಶ್ ಚೌಟ 1,49,208 ಮತಗಳ ಅಂತರದಿಂದ ಭರ್ಜರಿ ಗೆಲುವು

ಬೆಳ್ತಂಗಡಿ: ಭಾರಿ ಕುತೂಹಲ ಕೆರಳಿಸಿರುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಆರಂಭದಿಂದಲೇ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಮುನ್ನಡೆಯಲ್ಲಿದ್ದು, 1,49,208 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. 7,64,132 ಮತಗಳನ್ನು ಪಡೆದು ಜಯಭೇರಿಯಾಗಿದ್ದಾರೆ. ಚೌಟ ರವರು ನಿವೃತ್ತ ಭೂಸೇನೆಯ ಸೈನಿಕರಾಗಿದ್ದು ಪ್ರಥಮ ಬಾರಿಗೆ ಸಂಸತ್ ಪ್ರವೇಶಿಸಲಿದ್ದಾರೆ. ಸತತ ೩೫ ವರ್ಷಗಳಿಂದ ದ.ಕ ಲೋಕಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿದ್ದು ಇದೀಗ ಮತ್ತೋಮ್ಮೆ ಎಂದು ಸಾಭೀತಾಗಿದೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ 1,49,208 ಮತಗಳ ಅಂತರದಿAದ ಪರಭಾವಗೊಂಡಿದ್ದು, 6,14,924 ಮತಗಳನ್ನು ಪಡೆದಿದ್ದಾರೆ. ಈ ಬಾರಿ ಕುತಹಲ ಕೆರಳಿಸಿರುವ ನೋಟಾ 23,576 ಮತಗಳನ್ನು ಗಳಿಸಿ ತೃತೀಯ ಸ್ಥಾನದಲ್ಲಿದೆ.

ಯಾರಿಗೆ ಎಷ್ಟು ಮತ?:

ಸುದ್ದಿಯಲ್ಲಿ ಕ್ಷಣಕ್ಷಣದ ಮಾಹಿತಿ: ರಾಷ್ಟ್ರದ 18ನೇ ಲೋಕಸಭಾ ಚುನಾವಣೆಯ ಫಲಿತಾಂಶ ಭಾರೀ ಕುತೂಹಲ ಕೆರಳಿಸಿದ್ದು, ಗದ್ದುಗೆ ಏರುವವರು ಎಂದು ಕಾದು ನೋಡಬೇಕಿದೆ. ಲೋಕಸಭಾ ಚುನಾವಣೆಯ ಮತ ಎಣಿಕೆಯ ಕ್ಷಣಕ್ಷಣದ ಮಾಹಿತಿಗಾಗಿ ಸುದ್ದಿ ಬಿಡುಗಡೆ ವೆಬ್ ಸೈಟ್ ಮತ್ತು ಸುದ್ದಿ ನ್ಯೂಸ್ ಚಾನೆಲ್ ವೀಕ್ಷಿಸಬಹುದು.

Exit mobile version