Site icon Suddi Belthangady

ಬಿಜೆಪಿಯ ಭದ್ರಕೋಟೆಯಲ್ಲಿ ಕ್ಯಾ.ಬ್ರಿಜೇಶ್ ಚೌಟ ಭರ್ಜರಿ ಗೆಲವು- ಕಾಂಗ್ರೆಸ್‌ನ ಪದ್ಮರಾಜ್ ಪೂಜಾರಿಗೆ 1,44,522 ಮತಗಳ ಹಿನ್ನಡೆ

ಬೆಳ್ತಂಗಡಿ: ಭಾರಿ ಕುತೂಹಲ ಕೆರಳಿಸಿರುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಆರಂಭದಿಂದಲೇ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಮುನ್ನಡೆಯಲ್ಲಿದ್ದು, 1,44,522 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. 7,28,689 ಮತಗಳನ್ನು ಪಡೆದು ದ.ಕ. ಬಿಜೆಪಿಯ ಭದ್ರಕೋಟೆ ಎಂದು ಸಾಭೀತು ಪಡಿಸಿದ್ದಾರೆ. ಮಂಗಳೂರಿನ ಸುರತ್ಕಲ್ ಎನ್.ಐ.ಟಿ.ಕೆ.ಯಲ್ಲಿ ಭಾರಿ ಬಂದೋಬಸ್ತ್ ಮಧ್ಯೆ ಮತ ಎಣಿಕೆ ನಡೆಯಿತು. ಎಲ್ಲಾ ಸುತ್ತುಗಳ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎರಡನೇ ಸ್ಥಾನದಲ್ಲಿ ಮುಂದುವರಿದಿದ್ದ ಪದ್ಮರಾಜ್ ಆರ್. ಪೂಜಾರಿ ರವರರಿಗೆ 1,44,522 ಮತಗಳ ಭಾರಿ ಹಿನ್ನಡೆಯಾಗಿದೆ. ಪದ್ಮರಾಜ್ 5,84,167 ಮತಗಳನ್ನು ಪಡೆದಿದ್ದಾರೆ. ಭಾರಿ ಕುತೂಹಲ ಕೆರಳಿಸಿರುವ ನೋಟಾ ೨೨೫೦೪ ಮತಗಳನ್ನು ಪಡೆದು ತೃತೀಯ ಸ್ಥಾನದಲ್ಲಿದೆ. ಈ ಭಾರಿಯ ಚುನುವಾಣೆಯಲ್ಲಿ ನೋಟಾಕ್ಕೆ ಅಧಿಕ ಮತ ಚಲಾವಣೆಯಾಗಿದೆ. ಬ್ರಿಜೇಶ್ ಚೌಟ ಗೆಲವು ಸಾಧಿಸುತ್ತಿದ್ದಂತೆ ಕೆಲವೆಡೆ ಸಂಭ್ರಮಾಚರಣೆ ನಡೆಯುತ್ತಿದೆ.

ಯಾರಿಗೆ ಎಷ್ಟು ಮತ?:

ಸುದ್ದಿಯಲ್ಲಿ ಕ್ಷಣಕ್ಷಣದ ಮಾಹಿತಿ: ರಾಷ್ಟ್ರದ 18ನೇ ಲೋಕಸಭಾ ಚುನಾವಣೆಯ ಫಲಿತಾಂಶ ಭಾರೀ ಕುತೂಹಲ ಕೆರಳಿಸಿದ್ದು, ಗದ್ದುಗೆ ಏರುವವರು ಎಂದು ಕಾದು ನೋಡಬೇಕಿದೆ. ಲೋಕಸಭಾ ಚುನಾವಣೆಯ ಮತ ಎಣಿಕೆಯ ಕ್ಷಣಕ್ಷಣದ ಮಾಹಿತಿಗಾಗಿ ಸುದ್ದಿ ಬಿಡುಗಡೆ ವೆಬ್ ಸೈಟ್ ಮತ್ತು ಸುದ್ದಿ ನ್ಯೂಸ್ ಚಾನೆಲ್ ವೀಕ್ಷಿಸಬಹುದು.

Exit mobile version