Site icon Suddi Belthangady

ಜೂನ್ 12-15: ರಾಷ್ಟ್ರೀಯ ಟಾರ್ಗೆಟ್ ಬಾಲ್ ಫೆಡರೇಶನ್ ಕಪ್ ಪಂದ್ಯಾಟ- ರಾಷ್ಟ್ರ ಮಟ್ಟಕ್ಕೆ ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಆಯ್ಕೆ

ಮಡಂತ್ಯಾರು: ರಾಜಸ್ಥಾನದ ಆಲ್ವಾರಿನ LIET  ಕಾಲೇಜಿನಲ್ಲಿ ಜೂನ್ 12ರಿಂದ ಜೂನ್ 15ರವರೆಗೆ ನಡೆಯಲಿರುವ 8ನೇ ರಾಷ್ಟ್ರೀಯ ಟಾರ್ಗೆಟ್ ಬಾಲ್ ಫೆಡರೇಶನ್ ಕಪ್ ಪಂದ್ಯಾಟದಲ್ಲಿ, ಮಡಂತ್ಯಾರಿನ ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿಯ ಪ್ಲಾಯಿಡ್ ಮಿಸ್ಕಿತ್ ಇವರು ಕರ್ನಾಟಕ ಟಾರ್ಗೆಟ್ ಬಾಲ್ ತಂಡದ ಕಿರಿಯ ವಿಭಾಗವನ್ನು ಪ್ರತಿನಿಧಿಸಲಿರುವರು.

ಇವರಿಗೆ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಮಂಜುನಾಥ ಇವರು ತರಬೇತಿಯನ್ನು ನೀಡಿರುತ್ತಾರೆ.

Exit mobile version