Site icon Suddi Belthangady

ಅಳದಂಗಡಿ: ಸೈಂಟ್ ಪೀಟರ್ ಕ್ಲೇವರ್ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ

ಅಳದಂಗಡಿ: ಸೈಂಟ್ ಪೀಟರ್ ಕ್ಲೇವರ್ ಆಂಗ್ಲ ಮಾದ್ಯಮ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ವಿಜೃಂಭಣೆಯಿಂದ ಆಚರಿಸಲಾಯಿತು.

ಶಾಲಾ ಸಂಚಾಲಕ ವಂದನೀಯ ಫಾದರ್ ಎಲಿಯಾಸ್ ಡಿ’ಸೋಜ, ಮುಖ್ಯ ಶಿಕ್ಷಕರು, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಸ್ಟೀವನ್ ಪಾಯ್ಸ್ ಹಾಗೂ ಸಹ ಶಿಕ್ಷಕ ಅವಿನ್ ವಾಸ್, ವಿದ್ಯಾರ್ಥಿ ಧ್ಯಾನ್, ದೀಪ ಬೆಳಗಿಸುವುದರ ಮೂಲಕ 2024-25ರ ಶೈಕ್ಷಣಿಕ ವರ್ಷಕ್ಕೆ ಚಾಲನೆ ನೀಡಿದರು.

ನಂತರ ಶಾಲಾ ಸಂಚಾಲಕರು ನೂತನ ಮುಖ್ಯ ಶಿಕ್ಷಕ ನೋರ್ಬರ್ಟ್ ಪೌಲ್ ರವರನ್ನು ಮಕ್ಕಳಿಗೆ ಪರಿಚಯಿಸಿ ಸ್ವಾಗತಿಸಿದರು.

ನಂತರ ಹೊಸ ಶೈಕ್ಷಣಿಕ ವರ್ಷಕ್ಕೆ ಶುಭವನ್ನು ಹಾರೈಸಿ, ವಿದ್ಯಾರ್ಥಿಗಳು ಜೀವನದಲ್ಲಿ ಗುರಿ ಹೊಂದಿದ್ದರೆ ಯಶಸ್ಸು ಕಾಣಲು ಸಾಧ್ಯ ಎಂದರು.

ಈ ಸಂದರ್ಭದಲ್ಲಿ ಶಾಲಾ ಸಂಚಾಲಕರ ಹುಟ್ಟುಹಬ್ಬವನ್ನು ಆಚರಿಸಲಾಯಿತು.ಮುಖ್ಯ ಶಿಕ್ಷಕ ನೋರ್ಬರ್ಟ್ ಪೌಲ್ ಮಕ್ಕಳನ್ನು ಹೊಸ ಶೈಕ್ಷಣಿಕ ವರ್ಷಕ್ಕೆ ಸ್ವಾಗತಿಸಿದರು.

ವೇದಿಕೆಯಲ್ಲಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಸ್ಟೀವನ್ ಪಾಯ್ಸ್ ಉಪಸ್ಥಿತರಿದ್ದರು.

ಸಹ ಶಿಕ್ಷಕರು ಕಾರ್ಯಕ್ರಮಕ್ಕೆ ಸಹಕರಿಸಿದರು.ಸಹ ಶಿಕ್ಷಕಿ ವಿಶಾಲಾಕ್ಷಿ ಕಾರ್ಯಕ್ರಮವನ್ನು ನಿರೂಪಿಸಿ, ಸಹ ಶಿಕ್ಷಕಿ ನಿರ್ಮಲ ಸ್ವಾಗತಿಸಿ, ಸಹ ಶಿಕ್ಷಕಿ ನಂದಿನಿ ವಂದಿಸಿದರು.

Exit mobile version