Site icon Suddi Belthangady

ಚಿಕ್ಕಮಗಳೂರಿಗೆ ಕರೆದೊಯ್ದ ಗೆಳೆಯರಿಂದ ಮಟ್ಟ ಕೋಲಿನಿಂದ ಹಲ್ಲೆ: ಅಂಡಿಂಜೆಯ ಯುವಕ ವೆನ್‌ಲಾಕ್ ಆಸ್ಪತ್ರೆಯಲ್ಲಿ ಸಾವು

ಬೆಳ್ತಂಗಡಿ: ಪೈಂಟಿಂಗ್ ಕೆಲಸಕ್ಕೆಂದು ಚಿಕ್ಕಮಗಳೂರು ಕಡೆ ಹೋಗಿದ್ದ ಅಂಡಿಂಜೆ ಗ್ರಾಮದ ಮೂರು ಮಂದಿ ಸ್ನೇಹಿತರ ಮಧ್ಯೆ ಕುಡಿದ ಮತ್ತಿನಲ್ಲಿ ಯಾವುದೋ ವಿಚಾರಕ್ಕೆ ಸಂಬಂಧಿಸಿ ಜಗಳವಾಗಿ ಹೊಡೆದಾಡಿಕೊಂಡಿದ್ದು ಮೂವರ ಪೈಕಿ ಹಲ್ಲೆಗೊಳಗಾಗಿ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ ಯುವಕನೊಬ್ಬ ಇದೀಗ ಆಸ್ಪತ್ರೆಯಲ್ಲಿ ಮೃತಪಟ್ಟ ಪ್ರಕರಣ ಬೆಳಕಿಗೆ ಬಂದಿದೆ.

ಬೆಳ್ತಂಗಡಿ ತಾಲೂಕು ಅಂಡಿಂಜೆ ಗ್ರಾಮದ ದಿ.ಸುಂದರ ಹಾಗೂ ಲೂಸಿ ದಂಪತಿಯ ಪುತ್ರ ಪ್ರವೀಣ್ (26 ವ) ಎಂಬಾತನೇ ಗೆಳೆಯರ ಹಲ್ಲೆಯಿಂದ ಮೃತಪಟ್ಟ ಯುವಕ. ಬೆಳ್ತಂಗಡಿ ತಾಲೂಕು ಅಂಡಿಂಜೆ ಗ್ರಾಮದ ಕೌಶಿಕ್, ದೀಪಕ್ ಹಾಗೂ ಪ್ರವೀಣ ಎಂಬ ಮೂರು ಮಂದಿ ಯುವಕರು ಹೊತೆಗೆ ಕೆಲಸಕ್ಕೆ ಹೋಗುವವರಾಗಿದ್ದು ಕೆಲವು ದಿನಗಳ ಹಿಂದೆ ಪರಿಚಯದವರ ಮೂಲಕ ಚಿಕ್ಕಮಗಳೂರು ಕಡೆಗೆ ಪೈಂಟಿಂಗ್ ಕೆಲಸಕ್ಕೆ ಹೋಗಿದ್ದರು. ಮದ್ಯಪಾನದ ಅಭ್ಯಾಸವಿದ್ದ ಯುವಕರು ಯಾವುದೋ ಕಲ್ಲಕ ವಿಚಾರಕ್ಕೆ ಮಾತುಕತೆ ನಡೆದು ವಿಕೋಪಕ್ಕೆ ತಿರುಗಿ ಜಗಳ ಉಂಟಾಗಿ ಇಬ್ಬರು ಹೊಡೆದಾಡಿಕೊಂಡಿದ್ದು ಬಲಬಂದ ಏಟಿನಿಂದ ಪ್ರವೀಣ್ ಎಂಬಾತ ಗಂಭೀರ ಗಾಯಗೊಂಡಿದ್ದ ಹೊಡೆದಾಟದ ಬಳಿಕ ಚಿಕ್ಕಮಗಳೂರಿನಿಂದ ಯುವಕರು ವಾಪಾಸು ಬಂದಿದ್ದು ಹೊಡೆದಾಟದಲ್ಲಿ ಗಾಯಗೊಂಡು ತೀವ್ರ ಅಸ್ವಸ್ಥಗೊಂಡಿದ್ದ ಪ್ರವೀಣನನ್ನು ಬಿದ್ದು ಗಾಯಗೊಂಡಿರುವುದಾಗಿ ತಪ್ಪು ಮಾಹಿತಿ ನೀಡಿ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಲಾಗಿತ್ತು.

ಆದರೆ ಆಸಲಿಗೆ ಪ್ರವೀಣ್ ಮೇಲೆ ದೀಪಕ್ ಹಾಗೂ ಕೌತಿಕ್ ಇಬ್ಬರೂ ಸೇರಿ ಗಾರೆ ಕೆಲಸದ ಅಲುಮ್ಮಿನಿಯಂ ಮಟ್ಟ ಕೋಲು ಹಾಗೂ ಜಿಯರ್ ನಿಂದ ಹಲ್ಲೆಗೈದಿದ್ದು ತಲೆಗೂ ಕಣ್ಣಿಗೂ ಬಿದ್ದ ಗಂಭೀರ ಏಟಿನಿಂದ ಗಾಯಗೊಂಡರೂ ನಡುಗುತ್ತಾ ರೂಮಲ್ಲೇ ಮಲಗಿದ್ದ ಬಳಿಕ ಮನೆಯವರಿಗೆ ಗೊತ್ತಾದರೆ ಕಷ್ಟವೆಂದು ಹೆದರಿದ ದೀಪಕ್ ಮತ್ತು ಕೌಶಿಕ್ ತೀವ್ರ ಅಸ್ವಸ್ಥಗೊಂಡ ಪ್ರವೀಣವನ್ನು ಊರಾದ ಅಂಡಿಂಹಗೆ ಕರೆದುಕೊಂಡು ಬಂದು ನಡೆದ ಜಗಳ ಹೊಡೆದಾಟವನ್ನು ಮನೆಯವರಿಗೆ ಮುಚ್ಚಿಟ್ಟು ಮನೆಗೆ ಬಿಟ್ಟು ಹೋಗಿದ್ದರು. ಬಳಿಕ ಏನೂ ಆಗಿಲ್ಲವೆಂಬಂತೆ ಇನ್ನು ಬಜಾವ್ ಎಂದು ಆರಾಮವಾಗಿದ್ದರು. ಇನ್ನೊಂದೆಡೆ ಗಂಭೀರವಾದ ಹಲ್ಲೆ ನಡೆಸಿದ ಇಬ್ಬರ ಪೈಕಿ ದೀಪಕ್ “ಪ್ರವೀಣವಿಗೆ ಚೆನ್ನಾಗಿ ಹೊಡೆದಿದ್ದೇನೆ’ ಎಂಬುದಾಗಿ ಕೆಲವರಲ್ಲಿ ಸಾಧನೆ ಎಂಬಂತೆ ಜಂಭ ಕೊಚ್ಚಿಕೊಂಡು ತಿರುಗಾಡಿದ್ದೇ ಊರವರಿಗೂ ಮನೆಯವರಿಗೂ ಸಂಶಯ ಬಲವಾಗಲು ಕಾರಣವಾಯಿತು.

ಈ ಮಧ್ಯೆ ಗಂಭೀರ ಗಾಯಗಳಿಂದ ತೀವ್ರ ಅಸ್ವಸ್ಥಗೊಂಡ ಪ್ರವೀಣನನ್ನು ಕಂಡು ಮನೆಯವರು ಆತಂಕಗೊಂಡ ಕಾರಣ ಕೂಡಲೇ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಬೇಕಾಯಿತು. ಸಂಶಯಗೊಂಡ ವೆನ್‌ಲಾಕ್ ವೈದ್ಯರು ಊದಿಕೊಂಡು ಹೊರಗೆ ಬಂದಿದ್ದ ಒಂದು ಕಣ್ಣು ಹಾಗೂ ತಲೆಗಾಗಿದ್ದ ಗಂಭೀರ ಗಾಯಗಳನ್ನು ಹಾಗೂ ಇಡೀ ದೇಹವನ್ನು ಪರೀಕ್ಷಿಸಿ “ಇದು ಬಿದ್ದಿರುವ ಗಾಯವಲ್ಲ: ಇದು ಹೊಡೆದಾಟದ ಗಾಯಗಳು.” ಎಂದು ಪತ್ತೆ ಹಚ್ಚಿ ಚಿಕ್ಕಮಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಆಸ್ಪತ್ರೆಗೆ ಬಂದು ಮಹಜರು ಹೇಳಿಕೆ ದಾಖಲಿಸಿಕೊಂಡಿದ್ದರು.

ಪ್ರಕರಣ ಊರಿಗೆಲ್ಲ ಸುದ್ದಿಯಾದಾಗ ತಪ್ಪಿಸಿಕೊಳ್ಳುವ ತಯಾರಿಯಲ್ಲಿದ್ದ ಆರೋಪಿಗಳಾದ ದೀಪಕ್ ಹಾಗೂ ಕೌತಿಕ್ ನನ್ನು ಚಿಕ್ಕಮಗಳೂರು ಪೊಲೀಸರು ವಶಕ್ಕೆ ಪಡೆದುಕೊಂಡು ಕರೆದೊಯ್ದಿದ್ದಾರೆ. ಈ ಪ್ರಕರಣದ ಆರೋಪಿಗಳ ಪೈಕಿ ದೀಪಕ್ ವೇಣೂರು ಸುತ್ತಮುತ್ತ ಹಲವಾರು ಹೊಡೆದಾಗಿ ಪ್ರಕರಣಗಳಲ್ಲಿ ಭಾಗಿಯಾಗುವ ಚಾಳಿ ಹೊಂದಿದ್ದು ಊರವರಿಗೂ ತಿಳಿದ ಸಂಗತಿ. ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ ಪ್ರವೀಣ ಇದೀಗ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಚಿಕ್ಕಮಗಳೂರು ಹೊಲೀಸರು ಆರೋಪಿಗಳಾದ ದೀಪಕ್ ಮತ್ತು ಕೌತಿಕ್ ನನ್ನು ಬಂಧಿಸಿದ್ದು ತನಿಖೆ ನಡೆಸುತ್ತಿದ್ದಾರೆ.

Exit mobile version