ಪಿಲಿಚಂಡಿಕಲ್ಲು: 2024 25ನೇ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ ಮತ್ತು ಎಲ್ ಕೆ ಜಿ ಮತ್ತು ಯು ಕೆ ಜಿ ಉದ್ಘಾಟನಾ ಕಾರ್ಯಕ್ರಮವನ್ನು ಆಚರಿಸಲಾಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷ ಮುಸ್ತಾಪ ಕೆ ವಹಿಸಿದ್ದರು.ಎಲ್.ಕೆ.ಜಿ, ಯು ಕೆ ಜಿ ಉದ್ಘಾಟನೆಯನ್ನು ಗುರುವಾಯನಕೆರೆ ಸುಪ್ರೀಂ ಮಾರ್ಟ್ನ ಮಾಲಕ ಮಹಮ್ಮದ್ ಜುಬೈರ್ ಮದ್ದಡ್ಕ ಇವರು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಮಹಮ್ಮದ್ ಸಾಧಿಕ್ ಸಿವಿಲ್ ಇಂಜಿನಿಯರ್ ಮದ್ದಡ್ಕ ಇವರು ಉಪಸ್ಥಿತರಿದ್ದರು.
ಊರಿನ ಗಣ್ಯರು ಮತ್ತು ದಾನಿಗಳಾದ ಅಬ್ದುಲ್ ರೆಮಾನ್, ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಲಲಿತಾ ಚಿದಾನಂದ್, ಎಸ್.ಡಿ.ಎಂ.ಸಿ ಸದಸ್ಯರಾದ ಖಲಂದರ್ ಬಿ.ಹೆಚ್, ಶಾಲಾ ನಿಕಟ ಪೂರ್ವ ಎಸ್.ಡಿ.ಎಂ.ಸಿ ಅಧ್ಯಕ್ಷ ಅಬ್ದುಲ್ ಹಕೀಮ್, ರಾಜ್ಯ ಪ್ರಶಸ್ತಿ ವಿಜೇತರು ಚಿತ್ರಕಲಾ ಕಲಾವಿದರಾದ ಧನುಷ್ ವೇಣೂರು, ಪೋಷಕರು, ಹಳೆ ವಿದ್ಯಾರ್ಥಿಗಳು, ಶಿಕ್ಷಕರು, ಶಾಲಾ ವಿದ್ಯಾರ್ಥಿಗಳು ಮತ್ತು ಅಡುಗೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಎಲ್ ಕೆ ಜಿ ಮತ್ತು ಯುಕೆಜಿ ಒಂದನೇ ತರಗತಿ ಮಕ್ಕಳಿಗೆ ಕಿರು ಕಾಣಿಕೆ ಯೊಂದಿಗೆ ಹೂಗುಚ್ಛ ನೀಡಿ ಸ್ವಾಗತಿಸಲಾಯಿತು.
ಒಂದರಿಂದ ಏಳನೇ ಮಕ್ಕಳಿಗೆ ಉಚಿತ ಪಠ್ಯಪುಸ್ತಕ, ಸಮವಸ್ತ್ರ ವಿಸ್ತರಿಸಲಾಯಿತು.
ಇದೇ ವೇಳೆ ಸುಪ್ರೀಂ ಮಾರ್ಟಿನ್ ಮಾಲಕರು ಆದ ಮಹಮ್ಮದ್ ಜುಬೈರ್ ಎಲ್ ಕೆ ಜಿ ಮಕ್ಕಳಿಗೆ ಕೂರಲು ರೌಂಡ್ ಟೇಬಲ್ ಮತ್ತು ಕುರ್ಚಿಗಳನ್ನು ನೀಡಿ ಸಹಕರಿಸಿದರು.
ಶಾಲಾ ಸಹ ಶಿಕ್ಷಕಿ ಲಕ್ಷ್ಮಿ ಆಚಾರ್ತಿ ನಿರೂಪಿಸಿದರು.ಮಕ್ಕಳು ಪ್ರಾರ್ಥಿಸಿ, ನಂತರ ಮುಖ್ಯ ಶಿಕ್ಷಕ ನಾಗಪ್ಪ ಡಿ ಸ್ವಾಗತಿಸಿದರು.
ಎಲ್‌ಕೆಜಿ, ಯುಕೆಜಿ ಬಗ್ಗೆ ಮಾಹಿತಿ ನೀಡಿದವರು.ಅನಿತಾ ಕೆ ದೈಹಿಕ ಶಿಕ್ಷಣ ಶಿಕ್ಷಕರು, ಶಾಲಾ ಹಿರಿಯ ಶಿಕ್ಷಕ ಪೆಲ್ಸಿರೋಡ್ರಿಗಸ್ ಧನ್ಯವಾದಗೈದರು.