ವೇಣೂರು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆ ವೇಣೂರು ಇಲ್ಲಿ ಸುದೀರ್ಘ 38 ವರ್ಷಗಳ ಕಾಲ ಸಾರ್ಥಕ ಸೇವೆಯನ್ನು ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ ಉಮೇಶ್ ಕೆ ಕಲ್ಕಡ್ತಿಮಾರು ಇವರ ಬೀಳ್ಕೊಡುಗೆ ಸಮಾರಂಭ ಐಟಿಐಯಲ್ಲಿ ಜರುಗಿತು.
ಸಮಾರಂಭದ ಅಧ್ಯಕ್ಷತೆಯನ್ನು ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಸತೀಶ್ ಚಂದ್ರ ರವರು ವಹಿಸಿ ನಿವೃತ್ತಿ ಹೊಂದುತ್ತಿರುವ ಉಮೇಶ್ ಕೆ ರವರ ಕಾರ್ಯ ವೈಖರಿಯನ್ನು ಕೊಂಡಾಡಿದರು.ಸಂಸ್ಥೆಯ
ಪ್ರಾಚಾರ್ಯ ವಿಶ್ವೇಶ್ವರ ಪ್ರಸಾದ್ ಕೆ ಆರ್ ರವರು ನಿವೃತ್ತಿಕೊಳ್ಳುತ್ತಿರುವ ಉಮೇಶ್ ಕೆ ರವರು ಸುದೀರ್ಘ 38 ವರ್ಷಗಳ ಸಂಸ್ಥೆಯ ಏಳಿಗೆಗೆ ಶ್ರಮಿಸಿ ಸರ್ವತೋಮುಖ ಅಭಿವೃದ್ಧಿಗೆ ಕಾರಣಿಕರ್ತರಾಗಿದ್ದಾರೆ ಎಂದು ಮೆಚ್ಚುಗೆಯ ಮಾತನ್ನಾಡಿದರು.
ಮುಖ್ಯ ಅತಿಥಿಗಳಾಗಿ ಸಂಸ್ಥೆಯ ನಿವೃತ್ತ ಪ್ರಾಚಾರ್ಯ ಸದಾನಂದ ಪೂಜಾರಿ ಯವರು ಮಾತನಾಡಿ ಉಮೇಶ್ ಕೆ ರವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು, ಉಜಿರೆ ಮಹಿಳಾ ಐಟಿಐ ನ ಪ್ರಾಚಾರ್ಯ ಪ್ರಕಾಶ್ ಕಾಮತ್ ಹಾಗೂ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಿನರಾಜ ಜೈನ್ ಶುಭ ಹಾರೈಸಿದರು. ಉಮೇಶ್ ಕೆ ಯವರ ಪುತ್ರ ಹರ್ಷಿತ್ ಕುಮಾರ್, ಮಗಳಾದ ಹಂಶಿತ ಹಾಗೂ ಭಾರತೀಯ ಜೀವ ವಿಮಾ ನಿಗಮದ ಅಧಿಕಾರಿ ಹರೀಶ್ ಶೆಟ್ಟಿ ಶುಭ ಹಾರೈಸಿದರು.
ಸಂಸ್ಥೆಯ ಕಚೇರಿ ಸಿಬ್ಬಂದಿ ಫಣಿರಾಜ್ ಜೈನ್ ರವರು ಅಭಿನಂದನಾ ಭಾಷಣಗೈದು ಉಮೇಶ್ ಕೆ ಯವರು ಸಂಸ್ಥೆ ಪ್ರಾರಂಭ ಆದಾಗಿನಿಂದ ಈವರೆಗೆ ನಿಷ್ಠಾವಂತರಾಗಿ ಸೇವೆ ಸಲ್ಲಿಸಿ ಸಂಸ್ಥೆಯ ಹಿರಿಮೆಯನ್ನು ಹೆಚ್ಚಿಸಿದ್ದು ಕಿರಿಯ ಸಿಬ್ಬಂದಿಗಳಿಗೆ ಮಾದರಿಯಾಗಿದ್ದಾರೆ ಎಂದರು.
ವೇದಿಕೆಯಲ್ಲಿ ತರಬೇತಿ ಅಧಿಕಾರಿ ಪೀಟರ್ ಸಿಕ್ವೆರಾ, ಸೇವಾ ನಿವೃತ್ತಿಗೊಳ್ಳುತ್ತಿರುವ ಉಮೇಶ್ ಕೆ ಮತ್ತು ಅವರ ಧರ್ಮಪತ್ನಿ ಹೇಮಲತಾ ಉಪಸ್ಥಿತರಿದ್ದರು.ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ವತಿಯಿಂದ, ಐಟಿಐ ಸಿಬ್ಬಂದಿಗಳ ವತಿಯಿಂದ, ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಉಮೇಶ್ ಕೆ ದಂಪತಿಗಳನ್ನು ಸನ್ಮಾನಿ ಗೌರವಿಸಲಾಯಿತು.
ಸಂಸ್ಥೆಯ ನಿವೃತ್ತ ಪ್ರಾಚಾರ್ಯ ಸದಾನಂದ ಪೂಜಾರಿ, ಸಂಸ್ಥೆಯ ಹಿತೈಷಿ ಹಾಗೂ ಭಾರತೀಯ ಜೀವ ವಿಮಾ ನಿಗಮದ ಜಗನ್ನಾಥ ದೇವಾಡಿಗ, ಹರೀಶ್ ಶೆಟ್ಟಿ,ಎಸ್ ಡಿ ಎಂ ಐ ಟಿ ಐ ಸಂಸೆ ಇಲ್ಲಿನ ಕಚೇರಿ ಸಿಬ್ಬಂದಿ ಶರಣಬಸಪ್ಪ ಹಿರೇಮಠ್ ಸ್ಮರಣಿಕೆಯನ್ನು ನೀಡಿ ಅಭಿನಂದಿಸಿದರು.
ಇದೇ ಸಂಧರ್ಭದಲ್ಲಿ ಕಳೆದ ವರ್ಷ ಸಂಸ್ಥೆಯಿಂದ ನಿವೃತ್ತಿಯಾದ ಚಂದ್ರ ಕುಮಾರ್ ಹಾಗೂ ಸನತ್ ಕುಮಾರ್ ಜೈನ್ ಇವರನ್ನು ಎಸ್ ಡಿ ಎಂ ಶಿಕ್ಷಣ ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. ಸಮಾರಂಭದಲ್ಲಿ ನಿವೃತ್ತ ತರಬೇತಿ ಅಧಿಕಾರಿ ಶಿವ ರಾವ್ ವಿ ಉಪಸ್ಥಿತರಿದ್ದರು.
ಎಲೆಕ್ಟ್ರಾನಿಕ್ ಮೆಕಾನಿಕ್ ವಿಭಾಗದ ವಿದ್ಯಾರ್ಥಿ ಪ್ರಶಾಂತ್ ಪ್ರಾರ್ಥನೆ ಗೈದ ಕಾರ್ಯಕ್ರಮದಲ್ಲಿ ಕಿರಿಯ ತರಬೇತಿ ಅಧಿಕಾರಿ ರತ್ನಾಕರ ರಾವ್ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಪದ್ಮಪ್ರಸಾದ್ ಬಸ್ತಿ ಕಾರ್ಯಕ್ರಮ ನಿರೂಪಿಸಿ, ಶ್ರೀಧರ್ ಡಿ ಸನ್ಮಾನ ಪತ್ರ ವಾಚಿಸಿದರು, ದಯಾನಂದ ಭಂಡಾರಿ ಧನ್ಯವಾದ ಸಮರ್ಪಿಸಿದರು.