Site icon Suddi Belthangady

ಬಳಂಜ: ಅಟ್ಲಾಜೆ ಶಾಲಾ ಪ್ರಾರಂಭೋತ್ಸವ- ಸಮಾಜ ಸೇವಕ ಪ್ರವೀಣ್ ಲಾಂತ್ಯರ್ ರಿಂದ ಮಕ್ಕಳಿಗೆ ಉಚಿತ ಪುಸ್ತಕ ಹಾಗೂ ಕಲಿಕಾ ಸಾಮಗ್ರಿ ವಿತರಣೆ

ಬಳಂಜ: ಅಟ್ಲಾಜೆ ದ.ಕ.ಜಿ.ಪಂಚಾಯತ್ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 2024-25ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ ಹಾಗೂ ಸಮಾಜ ಸೇವಕ ಪ್ರವೀಣ್ ಪೂಜಾರಿ ಲಾಂತ್ಯಾರ್ ಮಕ್ಕಳಿಗೆ ಉಚಿತವಾಗಿ ನೀಡಿದ ಬರೆಯುವ ಪುಸ್ತಕ ಹಾಗೂ ಇತರ ಕಲಿಕಾ ಸಾಮಗ್ರಿಗಳ ವಿತರಣಾ ಕಾರ್ಯಕ್ರಮ ಮೇ 30ರಂದು ನಡೆಯಿತು.

ಈ ಕಾರ್ಯಕ್ರಮದಲ್ಲಿ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಜಗದೀಶ್ ಕೆ.ಉಪಾಧ್ಯಕ್ಷೆ ರೂಪಲತಾ, ಸರ್ವೋದಯ ಫ್ರೆಂಡ್ಸ್ ಅಧ್ಯಕ್ಷ ಸುರೇಶ್ ಹೇವ, ನವೀನ್ ಲಾಂತ್ಯರ್, ಚಂದ್ರಶೇಖರ್, ಶಾಲಾ ಮುಖ್ಯ ಶಿಕ್ಷಕರಾದ ಪ್ರಮೋದ್ ಎಸ್.ಸಹ ಶಿಕ್ಷಕಿ ಶ್ವೇತಾ ಆರ್.ಡಿ.ಮುಂತಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸರಕಾರದಿಂದ ಕೊಡಮಾಡಿದ ಪಠ್ಯ ಪುಸ್ತಕ, ಸಮವಸ್ತ್ರ, ಹಾಗೂ ಸಮಾಜ ಸೇವಕರಾದ ಪ್ರವೀಣ್ ಕುಮಾರ್ ಲಾಂತ್ಯಾರ್ ರವರು ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಿದ ಬರೆಯುವ ಪುಸ್ತಕ, ಪೆನ್ನು ಹಾಗೂ ಇತರ ಕಲಿಕಾ ಸಾಮಗ್ರಿಗಳನ್ನು ವಿತರಣೆ ಮಾಡಲಾಯಿತು.

Exit mobile version