ಕೊಯ್ಯೂರು: ಸರಕಾರಿ ಪ್ರೌಢಶಾಲೆಯಲ್ಲಿ 2024-25ನೇ ಶೈಕ್ಷಣಿಕ ಸಾಲಿನ ಶಾಲಾ ಪ್ರಾರಂಭೋತ್ಸವ ಮೇ 31ರಂದು ನಡೆಯಿತು.
ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜು ಇಲ್ಲಿಯ ಕನ್ನಡ ಪ್ರಾಧ್ಯಾಪಕರಾಧ ಡಾ.ದಿವಾ ಕೊಕ್ಕಡ ಇವರು ಉದ್ಘಾಟಿಸಿದರು.ಮಾತಾಡಿ ಶಿಕ್ಷಣ ಎಂಬ ಆಯುಧದಿಂದ ನಾವು ಜಗತ್ತನ್ನು ಗೆಲ್ಲಬಹುದು. ಇವತ್ತು ಜ್ಞಾನ ಎಂದರೆ ಅಂಕಗಳು ಎಂಬಂತೆ ಕಂಡು ಬರುತ್ತದೆ. ಆದರೆ ಅಂಕಗಳಿಂದ ಅಳತೆ ಮಾಡಲಾಗದ ಎಷ್ಟೋ ಜ್ಞಾನಗಳು ಇಂದು ನಮಗೆ ದಾರಿದೀಪವಾಗಿದೆ. ವಿದ್ಯಾರ್ಥಿಗಳು ಹಳ್ಳಿ ಜೀವನ ಕ್ರಮದಲ್ಲಿ ಕಂಡು ಬರುವ ಜ್ಞಾನವನ್ನು ಹೆಚ್ಚಾಗಿ ಪಡೆದುಕೊಂಡು ಅದನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಆರೋಗ್ಯವಂತ ಸತ್ಪ್ರಜೆಗಳಾಗಬೇಕು ಎಂದರು.
ಶಾಲಾ ಮುಖ್ಯ ಶಿಕ್ಷಕ ರಾಧಾಕೃಷ್ಣ ತಚ್ಚಮೆ ಪ್ರಸ್ತಾಪನೆಯೊಂದಿಗೆ ಸ್ವಾಗತಿಸಿದರು.ಬೇಬಿ ನಿರೂಪಿಸಿದರು.ದೀಪ್ತಿಹೆಗ್ಡೆ ವಂದಿಸಿದರು.ರಾಮಚಂದ್ರ ದೊಡಮನಿ, ಮೋಹನದಾಸ, ಪ್ರವೀಣ ಕುಮಾರ್ ಎಚ್, ಗೀತಾ, ಸುಧಾಕರ ಶೆಟ್ಟಿ ಮತ್ತು ವಿದ್ಯಾರ್ಥಿಪಾಲಕರು ಉಪಸ್ಥಿತರಿದ್ದರು.
ಉಚಿತ ಸಮವಸ್ತ್ರ, ಪುಸ್ತಕ ವಿತರಿಸಲಾಯಿತು. ಬಳಿಕ ಸಿಹಿಯೂಟ ನೀಡಲಾಯಿತು.