Site icon Suddi Belthangady

ಮಾಯ ಶಾಲೆಯ ಮೂವರು ವಿದ್ಯಾರ್ಥಿಗಳು ರಾಜ್ಯ ಮಟ್ಟದ ಎನ್.ಎಂ.ಎಂ.ಎಸ್ ವಿದ್ಯಾರ್ಥಿ ವೇತನಕ್ಕೆ ಆಯ್ಕೆ

ಬೆಳಾಲು :2023-24ನೇ ಶೈಕ್ಷಣಿಕ ವರ್ಷದಲ್ಲಿ ನಡೆದ ರಾಜ್ಯ ಮಟ್ಟದ ಎನ್.ಎಂ.ಎಂ.ಎಸ್ ಪರೀಕ್ಷೆಯಲ್ಲಿ ಬೆಳ್ತಂಗಡಿ ತಾಲೂಕಿನ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಂದ ಪರೀಕ್ಷೆ ಬರೆದ 1040 ಮಂದಿ 8 ನೇ ತರಗತಿಯ ವಿದ್ಯಾರ್ಥಿಗಳಲ್ಲಿ 30 ಮಂದಿ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿದ್ದು, ಆ ಪೈಕಿ ಬೆಳಾಲು ಸ.ಉ.ಪ್ರಾ.ಶಾಲೆ ಮಾಯ ಇಲ್ಲಿನ ಮೂವರು ವಿದ್ಯಾರ್ಥಿನಿಯರು ಆಯ್ಕೆಯಾಗಿದ್ದಾರೆ.

ಮಾಯದ ಶೀನಪ್ಪಗೌಡ ಹಾಗೂ ಯಮುನ ದಂಪತಿಗಳ ಪುತ್ರಿ ಕು.ಅಂಕಿತ, ಜಾರಪ್ಪ ಗೌಡ ಹಾಗೂ ಸುಶೀಲಾ ದಂಪತಿಗಳ ಪುತ್ರಿ ಕು.ಮೋಕ್ಷಿತಾ, ಹಾಗೂ ರತ್ನಾಕರ ಮತ್ತು ಸವಿತಾ ದಂಪತಿಗಳ ಪುತ್ರಿ, ಕು.ರಶ್ಮಿ ಈ ಮೂವರು ವಿದ್ಯಾರ್ಥಿನಿಯರು ಎನ್.ಎಂ.ಎಂ.ಎಸ್ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗುವ ಮೂಲಕ ಪೋಷಕರು, ಶಿಕ್ಷಕರು, ಶಾಲೆ, ಗ್ರಾಮ ಮಾತ್ರವಲ್ಲ ತಾಲೂಕಿಗೂ ಕೀರ್ತಿ ತಂದುಕೊಟ್ಟಿದ್ದಾರೆ.

ಇವರಿಗೆ ಶಾಲೆಯ ಜಿಪಿಟಿ ಶಿಕ್ಷಕ ಯೋಗೇಶ ಎಚ್.ಆರ್ ಹಾಗೂ ಸುಪ್ರಿಯಾ ಇವರು ತರಬೇತಿ ನೀಡಿರುತ್ತಾರೆ.

ಜೊತೆಗೆ ಇ-ಶಾಲೆ ಬೆಳ್ತಂಗಡಿ ಆನ್ಲೈನ್ ವೇದಿಕೆಯಲ್ಲಿಯೂ ತರಬೇತಿ ಪಡೆದಿದ್ದಾರೆ.

ಎನ್.ಎಂ.ಎಂ.ಎಸ್ ಪರೀಕ್ಷೆಯಲ್ಲಿ ಆಯ್ಕೆಯಾದ ಪ್ರತಿಯೊಬ್ಬ ವಿದ್ಯಾರ್ಥಿಗೂ ತಿಂಗಳಿಗೆ 1000 ರೂ ನಂತೆ ವರ್ಷಕ್ಕೆ 12,000 ರೂ ಮುಂದಿನ ನಾಲ್ಕು ವರ್ಷಗಳ ವರೆಗೆ ಒಟ್ಟು 48000ರೂ ವಿದ್ಯಾರ್ಥಿ ವೇತನ ದೊರೆಯಲಿದೆ.

Exit mobile version