ಬರೆಂಗಾಯ: “ಶಾಲೆ ಆರಂಭ” ಒಂದಷ್ಟು ಮಕ್ಕಳಿಗೆ ಖುಷಿ ಇನ್ನೊಂದಷ್ಟು ಮಕ್ಕಳಿಗೆ “ಅಯ್ಯೋ ಶಾಲೆಗ್ ಪೋವೊಡೆ” ಎನ್ನುವ ಉದಾಸೀನತೆ. ಒಟ್ಟಾರೆ ಶಾಲೆ ಆರಂಭ ಹೋಗಲೇ ಬೇಕು ಹಾಗೆಯೇ ಬರೆಂಗಾಯ ಶಾಲಾ ಮಕ್ಕಳನ್ನು ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕರು ಬ್ಯಾಂಡ್ ವಾದ್ಯ ದ ಮೂಲಕ ಮೆರವಣಿಗೆ ನಡೆಸಿ ಮಕ್ಕಳನ್ನು ಶಾಲೆಗೆ ಮೇ 31ರಂದು ಬರಮಾಡಿಕೊಂಡರು.
ಮಕ್ಕಳು ಉತ್ಸಾಹದಿಂದ ಈ ಪ್ರಾರಂಭೋತ್ಸವದಲ್ಲಿ ಪಾಲ್ಗೊಂಡು ಖುಷಿಪಟ್ಟರು. ಎಸ್ ಡಿ ಎಂ ಸಿ ಅಧ್ಯಕ್ಷ ರುಕ್ಮಯ ಪೂಜಾರಿ, ಶಾಲಾ ಮುಖ್ಯ ಗುರುಗಳಾದ ಗೋಪಾಲ್ ರವರು ಮಕ್ಕಳಿಗೆ ಸರಕಾರದಿಂದ ಕೊಡಮಾಡುವ ಪುಸ್ತಕ ಹಾಗೂ ಇನ್ನಿತರ ವಸ್ತುಗಳನ್ನು ವಿತರಿಸಿ, ವಿದ್ಯೆ ಎಷ್ಟು ಮುಖ್ಯ ಎಂಬುದರ ಕುರಿತು ಮಕ್ಕಳಿಗೆ ಕಿವಿಮಾತು ಹೇಳಿದರು.