Site icon Suddi Belthangady

ಸಂತ ತೆರೇಸಾ ಪ್ರೌಢಶಾಲೆಯಲ್ಲಿ ತ್ರಿವಳಿ ಸಂಭ್ರಮ

ಬೆಳ್ತಂಗಡಿ: 2023-24ನೇ ಶೈಕ್ಷಣಿಕ ವರ್ಷದಲ್ಲಿ ಎಸ್ ಎಸ್ ಎಲ್ ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳು 100% ಫಲಿತಾಂಶ ಪಡೆದ ಸಂಭ್ರಮ.

ಅರ್ಸುಲೈನ್ ಫ್ರಾನ್ಸಿಸ್ಕನ್ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ವರ್ಷಂಪ್ರತಿ ಮೈಸೂರು, ಹುಬ್ಬಳ್ಳಿ ಹಾಗೂ ಮಂಗಳೂರು ಪ್ರಾಂತ್ಯ ವ್ಯಾಪ್ತಿಗೆ ಒಳಪಟ್ಟ ಶಿಕ್ಷಣ ಸಂಸ್ಥೆಗಳಿಗೆ ನಡೆಸುವ ಸ್ಪರ್ದೆಯ ಧ್ಯೇಯ ವಾಕ್ಯ “ ಭಾರತ ಒಂದು ಪ್ರಜಾಪ್ರಭುತ್ವ ರಾಷ್ಟ್ರ”- ಇದರಲ್ಲಿ ಸಂತ ತೆರೇಸಾ ಪ್ರೌಢಶಾಲೆ ಪ್ರಥಮ ಸ್ಥಾನಗಳಿಸಿದ ಮತ್ತೊಂದು ಸಂಭ್ರಮ. 2024-25ನೇ ಶೈಕ್ಷಣಿಕ ವರ್ಷದ ‘ಶಾಲಾ ಪ್ರಾರಂಭೋತ್ಸವ’ ಶೈಕ್ಷಣಿಕ ಬಲವರ್ಧನೆ ಕಾರ್ಯಕ್ರಮ ಆಚರಿಸಲಾಯಿತು.

ಸಂಚಾಲಕ ವಂ.ಭಗಿನಿ ತೆರೇಸಾ ಶೇರಾ, ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷೆ ಜಯಲಕ್ಷ್ಮೀ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು, ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ನಾರಾಯಣ ಶೆಟ್ಟಿ ಹಾಗೂ ಸಂತ ತೆರೇಸಾ ಕಾಂಪೋಸಿಟ್ ಪಿ ಯು ಕಾಲೇಜಿನ ಪ್ರಾಂಶುಪಾಲ ವಂ.ಭಗಿನಿ ಆರೋಗ್ಯ ಇವರನ್ನು ಶಾಲಾ ಮುಖ್ಯೋಪಾಧ್ಯಾಯಿನಿ ವಂ.ಭಗಿನಿ ಲೀನಾ ಡಿಸೋಜರವರು ಶಾಲಾ ಸಭಾಂಗಣಕ್ಕೆ ವಾದ್ಯ ಮೇಳದೊಂದಿಗೆ ಸ್ವಾಗತಿಸಿದರು.

ತ್ರಿವಳಿ ಸಂಭ್ರಮವನ್ನು ಕೇಕ್ ಕತ್ತರಿಸುವ ಮೂಲಕ ಅಭಿನಂದನೆ ಸಲ್ಲಿಸಲಾಯಿತು. ದೇವರ ಅನುಗ್ರಹವನ್ನು ಭಗಿನಿ ಫಿಲೋಮಿನಾ ಡಿಸೋಜರವರ ನೇತೃತ್ವದಲ್ಲಿ ವಿದ್ಯಾರ್ಥಿಗಳು ನಡೆಸಿಕೊಟ್ಟರು.
2024-25ನೇ ಶೈಕ್ಷಣಿಕ ವರ್ಷದ ಶೈಕ್ಷಣಿಕ ಬಲವರ್ಧನೆಯನ್ನು ಸಾಂಕೇತಿಕವಾಗಿ ವೇದಿಕೆಯ ಗಣ್ಯರು ತೆರೆದ ಪಠ್ಯಪುಸ್ತಕವನ್ನು ಇರಿಸಿ ದೀಪಗಳನ್ನು ಉರಿಸುವ ಮೂಲಕ ಉದ್ಘಾಟಿಸಿದರು.

ಶಾಲೆಯಲ್ಲಿ ಸೇವೆ ನೀಡುವ ಸಿಬ್ಬಂದಿ ವರ್ಗದವರು ಸ್ವಪರಿಚಯವನ್ನು ಮಾಡಿದರು. ಅದ್ಯಕ್ಷೀಯ ಸ್ಥಾನದಿಂದ ಸಂಭ್ರಮಕ್ಕೆ ಕಾರಣೀಕರ್ತರಾದ ಎಲ್ಲರನ್ನೂ ಸಂಚಾಲಕರು ಅಭಿನಂದಿಸಿದರು. ವಿಜ್ಞಾನ ಶಿಕ್ಷಕಿ ನಿಶಾ ಪಿರೇರಾರವರು ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ನಿರೂಪಿಸಿದರು. ಭಗಿನಿ ಜೆಸಿಂತಾರವರು ಕಾರ್ಯಕ್ರಮದ ಯಶಸ್ಸಿಗೆ ಕಾರಣಕರ್ತರಾದವರನ್ನು ವಂದಿಸಿದರು.

Exit mobile version