ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಕೃಷಿ ಇಲಾಖೆಯ ಕೃಷಿ ಅಧಿಕಾರಿ ಚಿದಾನಂದ ಹೂಗಾರ್ ರವರಿಗೆ ಬೀಳ್ಕೊಡುಗೆ ಸಮಾರಂಭ ಮೇ 31ರಂದು ಬೆಳ್ತಂಗಡಿ ಸಹಾಯಕ ಕೃಷಿ ನಿರ್ದೇಶಕ ಕಛೇರಿ ಸಭಾಂಗಣದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ, ಕೃಷಿ ಇಲಾಖೆಯ ಜಿಲ್ಲಾ ಜಂಟಿ ನಿರ್ದೇಶಕ ಕೇಪೆಂಗೌಡ, ಕೃಷಿ ಕೇಂದ್ರದ ಅಧ್ಯಕ್ಷ ಮಹಾವೀರ ಜೈನ್, ಸಹಾಯಕ ಕೃಷಿ ನಿರ್ದೇಶಕ ರಂಜಿತ್ ಕುಮಾರ್, ಬೆಂಗಳೂರು ಸಹಾಯಕ ನಿರ್ದೇಶಕ ಪದ್ಮಯ್ಯ ನಾಯಕ್, ಚಿದಾನಂದ ಹೂಗಾರ್ ಪತ್ನಿ ಪಾರ್ವತಿ, ಜಿಲ್ಲಾ ರೈತ ಸಂಘದ ಸಹಕಾರ ವಿಭಾಗದ ಪ್ರಮುಖ ಎಸ್.ರಾಜುಪೂಜಾರಿ, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.
ಚಿದಾನಂದ ಹೂಗಾರ್ ರವರು 1989ರಲ್ಲಿ ಪುತ್ತೂರು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಕೃಷಿ ಸಹಾಯಕರಾಗಿ ಕರ್ತವ್ಯಕ್ಕೆ ಹಾಜರಾಗಿದ್ದರು.
1998ರಲ್ಲಿ ಬೆಳ್ತಂಗಡಿಗೆ ವರ್ಗವಣೆಗೊಂಡರು.ಬೆಳ್ತಂಗಡಿ ಕೃಷಿ ಇಲಾಖೆಯಲ್ಲಿ ಸುದೀರ್ಘ 26 ವರ್ಷ ಸೇವೆ ಸಲ್ಲಿಸಿದ್ದ ಚಿದಾನಂದ ಹೂಗಾರ್ ಸಹಾಯಕ ಕೃಷಿ ಅಧಿಕಾರಿ, ಕೃಷಿ ಅಧಿಕಾರಿ, ಪ್ರಭಾರ ತಾಂತ್ರಿಕ ಅಧಿಕಾರಿ, ಕೊಕ್ಕಡ- ವೇಣೂರು ರೈತ ಸಂಪರ್ಕ ಕೇಂದ್ರ ಹಾಗೂ ಬೀಜೋತ್ಪನ್ನ ಕೇಂದ್ರದಲ್ಲಿ ಸೇವೆಗೈದಿದ್ದಾರೆ.
ಪ್ರಸುತ್ತ ಬೆಳ್ತಂಗಡಿ ಸರಕಾರಿ ನೌಕರರ ಸಂಘದಲ್ಲಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಮೂಲತಃ ವಿಜಯಪುರದವರು. ಪತ್ನಿ ಪಾರ್ವತಿ, ಮಕ್ಕಳಾದ ವಿದ್ಯಾಶ್ರೀ, ವೀಣಾ ಹಾಗೂ ವಿನಯ್ ಕುಮಾರ್ ಜೊತೆ ಧರ್ಮಸ್ಥಳದಲ್ಲಿ ವಾಸ್ಯವಿದ್ದಾರೆ.
ವಿವಿಧ ಇಲಾಖೆಗಳ ಅಧಿಕಾರಿಗಳು ಚಿದಾನಂದ ಎಸ್.ಹೂಗಾರ್ ಬಗ್ಗೆ ಅನಿಸಿಕೆಯನ್ನು ಹೇಳಿದರು.