Site icon Suddi Belthangady

ಪದ್ಮುಂಜ ಪ್ರೌಡ ಮತ್ತು ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ ಸಂಭ್ರಮ

ಪದ್ಮುಂಜ: ಸರಕಾರಿ ಪ್ರೌಢ ಶಾಲೆ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪದ್ಮುಂಜ ಇದರ ಪ್ರಾರಂಭೋತ್ಸವ ಸಂಭ್ರಮ ಮೇ 31ರಂದು ಪದ್ಮುಂಜದಲ್ಲಿ ನಡೆಯಿತು.

ಪ್ರೌಡ ಮತ್ತು ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಜೊತೆಯಾಗಿ ಬ್ಯಾಂಡ್ ವಾದ್ಯದೊಂದಿಗೆ ಪದ್ಮುಂಜ ಪೇಟೆಯಲ್ಲಿ ಮೆರವಣಿಗೆ ನಡೆಸಿದರು.ವಿದ್ಯಾರ್ಥಿಗಳಿಗೆ ಬಲೂನ್ ಗಳನ್ನು ನೀಡಿ ಶಾಲೆಗೆ ಬರಮಾಡಿಕೊಳ್ಳಲಾಯಿತು.

ಪ್ರೌಢ ಶಾಲಾ ಮುಖ್ಯೋಪಾಧ್ಯಯರು ಸುಮತಿ ಪಿ ಎನ್ ಹಾಗೂ ವಿನಯಕುಮಾರ್, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು ಕೀರ್ತಿ ಹಾಗೂ ತೇಜ, ಅಧ್ಯಾಪಕ ವೃಂದದವರು, ಎಸ್ ಡಿ ಎಂ ಸಿ ಸದಸ್ಯರು, ಪೋಷಕರು ಉಪಸ್ಥಿತರಿದ್ದರು.

Exit mobile version