Site icon Suddi Belthangady

ಅಕ್ರಮ ಕಲ್ಲು ಗಣಿಗಾರಿಕೆ ಪ್ರಕರಣ: ಪ್ರಮೋದ್ ಉಜಿರೆ, ಶಶಿರಾಜ್ ಶೆಟ್ಟಿ, ಲೋಕನಾಥ ಪೂಜಾರಿ ವಿರುದ್ಧ ಬೆಳ್ತಂಗಡಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ ಗಣಿ ಇಲಾಖೆ

ಬೆಳ್ತಂಗಡಿ: ಅಕ್ರಮ ಕಲ್ಲು ಗಣಿಗಾರಿಕೆ ನಡೆಸಿದ ಆರೋಪದಡಿ ಬೆಳ್ತಂಗಡಿಯ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಪರವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂ ವಿಜ್ಞಾನಿ ಗಿರೀಶ್ ಮೋಹನ್ ಎಸ್.ರವರು ಮಲವಂತಿಗೆ ಗ್ರಾಮದ ದಿಡುಪೆಯ ಪೊಯ್ಯಗುಡ್ಡದ ಮನೆಯ ಪ್ರಮೋದ್ ಉಜಿರೆ, ಮೇಲಂತಬೆಟ್ಟು ಗ್ರಾಮದ ಕಡಂಬು ಮನೆಯ ಶಶಿರಾಜ್ ಶೆಟ್ಟಿ ಮತ್ತು ಮೇಲಂತಬೆಟ್ಟು ಗ್ರಾಮದ ಮೂಡಲದ ಲೋಕನಾಥ ಪೂಜಾರಿ ಯಾನೆ ಸೂರಪ್ಪ ಪೂಜಾರಿ ಎಂಬವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದ ವಿಚಾರಣೆ ಮುಂದಿನ ದಿನಗಳಲ್ಲಿ ನಡೆಯಬೇಕಿದೆ.
ಪ್ರಕರಣದ ಸಾರಾಂಶ: ದಂಡ ಪ್ರಕ್ರಿಯಾ ಸಂಹಿತೆ ಕಲಂ ೨೦೦ ಮತ್ತು ಗಣಿ ಮತ್ತು ಖನಿಜಗಳು (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯಿದೆ ೧೯೫೭ರ ಕಲಂ ೪(೧) ಮತ್ತು ಕಲಂ ೯ ಮತ್ತು ೨೧, ೨೩ ಸಿ ಮತ್ತು ಕರ್ನಾಟಕ ಉಪಖನಿಜ ರಿಯಾಯಿತಿ ೧೯೯೪ ೫ ೩ ೨೦೨೦೫ ೨ ೩(೧), ೩೬(೩), ೪೨(೧), ೪೩(೨) ೨ ೪೪ ರಡಿ ಪ್ರಕರಣ ದಾಖಲಿಸಲಾಗಿದ್ದು ಈ ಪ್ರಕರಣದಲ್ಲಿ ಫಿರ್ಯಾದಿದಾರರು ಮೇಲ್ಕಾಣಿಸಿದ ಕಾಯಿದೆಗಳನ್ವಯ ಮತ್ತು ಕರ್ನಾಟಕ ಸರ್ಕಾರದ ನಿಯಾಮಾನುಸಾರ ತನಿಖೆ ನಡೆಸಿ ಫಿರ್ಯಾದಿಯನ್ನು ಸಲ್ಲಿಸಲು ಅಧಿಕಾರ ಹೊಂದಿರುತ್ತಾರೆ. ಈ ಪ್ರಕರಣವು ನ್ಯಾಯಾಲಯದ ಸರಹದ್ದಿನ ಬೆಳ್ತಂಗಡಿ ತಾಲ್ಲೂಕು ಮೇಲಂತಬೆಟ್ಟು ಗ್ರಾಮದ ಮೂಡಲ ಎಂಬ ಪ್ರದೇಶದಲ್ಲಿ ಪತ್ತೆ ಹಚ್ಚಲಾಗಿದ್ದು ನ್ಯಾಯಾಲಯದ ಅಧಿಕಾರ ವ್ಯಾಪ್ತಿ ಹೊಂದಿರುತ್ತದೆ.
ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲ್ಲೂಕು ಮೇಲಂತಬೆಟ್ಟು ಗ್ರಾಮದ ಮೂಡಲ ಎಂಬ ಸ್ಥಳದಲ್ಲಿರುವ ಸರ್ವೆ ನಂ ೧೨ರಲ್ಲಿ ಅಕ್ರಮ ಕಟ್ಟಡ ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಮಾಹಿತಿ ಮೇರೆಗೆ ಸದರಿ ಪ್ರದೇಶಕ್ಕೆ ತಹಶೀಲ್ದಾರರು ದಿನಾಂಕ ೧೮-೦೫-೨೦೨೪ರಂದು ೧೯:೩೦ ಗಂಟೆ ಸಮಯಕ್ಕೆ ಗ್ರಾಮ ಸಹಾಯಕ ರಹಾನ್, ತಾಲ್ಲೂಕು ಕಛೇರಿ ಸಿಬ್ಬಂದಿ ಪ್ರಜ್ವಲ್, ಬೆಳ್ತಂಗಡಿ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ಮುರಳೀಧರ್ ಜೊತೆಗೂಡಿ ದಾಳಿ ನಡೆಸಿದ್ದು ದಾಳಿಯಲ್ಲಿ ಅಕ್ರಮ ಕಲ್ಲು ತೆಗೆದಿರುವುದರ ಬಗ್ಗೆ ಹಾಗೂ ಅದರ ರಾಶಿ ಮತ್ತು ಸಿಡಿ ಮದ್ದುಗಳು ಸ್ಥಳದಲ್ಲಿಯೇ ಸಿಕ್ಕಿರುವುದಾಗಿ ಹಾಗೂ ಹಿಟಾಚಿ-೧, ಟ್ರಾಕ್ಟರ್-೧, ಮದ್ದುಗುಂಡು ಜೀವಂತ ೪, ಮದ್ದುಗುಂಡು ಬಳಸಿದಂತಹ ೪ ಹಾಗೂ ಕೆಲಸದವರು (೧) ನಿತೇಶ್, (೨) ಚಂದ್ರಶೇಖರ, (೩) ಪ್ರಮೋದ್, (೪) ರಾಜೇಶ್ ಇದ್ದು ಇದರಲ್ಲಿ ನಿತೇಶ್ ಎಂಬಾತನನ್ನು ವಿಚಾರಿಸಲಾಗಿ ಈ ಅಕ್ರಮ ಗಣಿಗಾರಿಕೆಯನ್ನು ಪ್ರಮೋದ್ ಉಜಿರೆ ಮತ್ತು ಶಶಿರಾಜ್‌ರವರು ಮಾಡುತ್ತಾರೆಂದು ತಿಳಿಸಿರುತ್ತಾರೆ. ಗಣಿಗಾರಿಕೆ ಸ್ಥಳದಲ್ಲಿ ಸಿಕ್ಕ ವಸ್ತುಗಳು (೧) ಏಜಿಠಿZeಜಿ ಔ – ಐ ಓuIಅS ಖಖಿ Pಇ ೭೧೧ ಇದರ ಅಂದಾಜು ಮೌಲ್ಯ ರೂ. ೩ ಲಕ್ಷ ಆಗಬಹುದು (೨) SZಠಿಟ್ಟ೧ ಘೆಟ. ಓಅ ೨೧ S ೧೩೪ ಇದರ ಅಂದಾಜು ಮೌಲ್ಯ ರೂ. ೧ ಲಕ್ಷ (೩) ಬಳಸಿದ ಮದ್ದುಗುಂಡುಗಳು ವಯರ್ ಸಮೇತ-೪ (೪) ಜೀವಂತ ಮದ್ದುಗುಂಡುಗಳು-೪ (೫) ಒಡೆದ ಕಲ್ಲುಗಳನ್ನು ಸ್ಥಳದಲ್ಲಿಯೇ ಇರಿಸಿ ಜಪ್ತಿ ಮಾಡಿದ ಸೊತ್ತುಗಳನ್ನು ಸುಪರ್ದಿಗೆ ತೆಗೆದುಕೊಂಡು ಅಕ್ರಮ ಕಲ್ಲು ಗಣಿಗಾರಿಕೆ ಚಟುವಟಿಕೆ ನಡೆಸಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿರುತ್ತಾರೆ.
ಸದರಿ ಪ್ರದೇಶವನ್ನು ದಿನಾಂಕ ೨೦-೦೫-೨೦೨೪ರಂದು ಕಛೇರಿಯ ಕಿರಿಯ ಅಭಿಯಂತರರ ಜೊತೆಯಲ್ಲಿ ಭೇಟಿ ಇತ್ತು ಪರಿಶೀಲಿಸಲಾಗಿ ಸದರಿ ಸರ್ವೆ ಸಂಖ್ಯೆ ೧೨/೧ರಲ್ಲಿ ಎರಡು ಕಡೆ ಅನಧಿಕೃತವಾಗಿ ಕಟ್ಟಡ ಕಲ್ಲು ಉಪಖನಿಜವನ್ನು ಗಣಿಗಾರಿಕೆ ನೆಡೆಸಿರುವುದು ದೃಢಪಟ್ಟಿದ್ದು ಪ್ರದೇಶದ ಅಕ್ಷಾಂಶ ಮತ್ತು ರೇಖಾಂಶವು (೧) ಓ ೧೩ ೦೦ ೩೪.೦೫ ಇ ೭೫ ೧೫ ೫೧.೯೨ (೨)ಓ ೧೩ ೦ ೩೪.೦೫, ಇ ೭೫ ೧೫ ೫೧.೯೨ (೩) ಓ ೧೩ ೦೦ ೩೪.೭೩ ಇ ೭೫ ೧೫ ೫೧.೨೩ (೪) ಓ ೧೩ ೦೦ ೩೪.೮೪ ಇ ೭೫ ೪೫ ೫೧.೫೧ ಆಗಿರುತ್ತದೆ. ಸ್ಥಳ ಪರಿಶೀಲನೆಯಂತೆ ಪ್ರದೇಶದಲ್ಲಿ ಅಂದಾಜು ಸುಮಾರು ೧,೫೭೧.೭ ಮೆ.ಟನ್ ಕಟ್ಟಡ ಕಲ್ಲು ಉತ್ಪಾದಿಸಿ ಸಾಗಾಟ ಮಾಡಿರುವುದು ಕಂಡುಬಂದಿರುತ್ತದೆ ಮತ್ತು ಪ್ರದೇಶದಲ್ಲಿ ಕಲ್ಲು ತೆಗೆಯಲು ಸ್ಪೋಟಕಗಳನ್ನು ಬಳಸಿದ್ದು ಸ್ಪೋಟಿಸಲು ಉಪಯೋಗಿಸಿದ್ದ ಕಿತ್ತಳೆ ವರ್ಣದ ನಾಲ್ಕು ಉಪಯೋಗಿಸದ ಫ್ಯೂಸ್ ಮತ್ತು ಒಂದು ಉಪಯೋಗಿಸಿರುವ ಫ್ಯೂಸ್ ಹಾಗೂ ಕಿತ್ತಳೆ ವರ್ಣದ ಕನೆಕ್ಟಿಂಗ್ ವೈರ್‌ಗಳು ಬಿದ್ದಿರುತ್ತವೆ ಅವುಗಳನ್ನು ಸಂಗ್ರಹಿಸಿ ಹಳದಿ ವರ್ಣದ ಪ್ಲಾಸ್ಟಿಕ್ ಚೀಲಕ್ಕೆ ಹಾಕಿ ತರಲಾಗಿರುತ್ತದೆ ಮತ್ತು ಸ್ಪೋಟಕಗಳನ್ನು ಬಳಸಲು ಕಲ್ಲಿಗೆ ಕುಳಿಗಳನ್ನು ಹಾಕಿರುವುದು ಕಂಡುಬಂದಿರುತ್ತದೆ. ಪ್ರದೇಶಕ್ಕೆ ತಾಗಿಕೊಂಡು ಇರುವ ಸೂರಪ್ಪ ಪೂಜಾರಿ ಇವರ ಒಡೆತನದ ಪಟ್ಟಾ ಭೂಮಿ ಸರ್ವೆ ಸಂಖ್ಯೆ ೬೩/೧ಎರಲ್ಲಿ ಅಕ್ರಮ ಗಣಿಗಾರಿಕೆ ಮಾಡುವ ಪ್ರದೇಶಕ್ಕೆ ರಸ್ತೆ ನಿರ್ಮಾಣ ಮಾಡಿಕೊಂಡು ಉತ್ಪಾದಿಸಿದ ಕಟ್ಟಡ ಕಲ್ಲನ್ನು ಸಾಗಾಟ ಮಾಡಿರುವುದು ಕಂಡುಬಂದಿರುತ್ತದೆ ಪ್ರದೇಶದಲ್ಲಿ ಅಂದಾಜು ಸುಮಾರು ೬೫ರಿಂದ ೭೦ ಮೆಟ್ರಿಕ್ ಟನ್ ಕಟ್ಟಡ ಕಲ್ಲು ದಾಸ್ತಾನಿರುತ್ತದೆ.
ಸ್ಥಳ ಪರಿಶೀಲನೆಯ ಸಂದರ್ಭದಲ್ಲಿ ಹಾಜರಿದ್ದ ಸ್ಥಳೀಯರನ್ನು ವಿಚಾರಿಸಲಾಗಿ ಹಾಗೂ ತಹಶೀಲ್ದಾರರು ಬೆಳ್ತಂಗಡಿ ತಾಲ್ಲೂಕು ಇವರು ದಿನಾಂಕ ೧೮-೦೫-೨೦೨೪ರಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ದೂರಿನಂತೆ ಪ್ರದೇಶದಲ್ಲಿ ಪ್ರಮೋದ್ ಉಜಿರೆ, ಶಶಿರಾಜ್ ಶೆಟ್ಟಿ ಮತ್ತು ಸೂರಪ್ಪ ಪೂಜಾರಿ ಇವರುಗಳು ಜಂಟಿಯಾಗಿ ಮತ್ತು ಪ್ರತ್ಯೇಕವಾಗಿ ಅಕ್ರಮವಾಗಿ ಸ್ಪೋಟಕಗಳನ್ನು ಬಳಸಿ ಗಣಿಗಾರಿಕೆ ಮಾಡಿರುವುದು ದೃಢಪಟ್ಟಿರುತ್ತದೆ. ಈ ಪ್ರಕರಣ ಸಂಬಂಧ ತಯಾರಿಸಿದ ಮಹಜರನ್ನು ಸರಹದ್ದಿನ ನ್ಯಾಯಾಲಯಕ್ಕೆ ಈ ಪಿರ್ಯಾದಿಯೊಂದಿಗೆ ಲಗತ್ತಿಸಲಾಗಿದೆ.
ಈ ಪ್ರಕರಣದ ಆರೋಪಿಗಳು ಅಕ್ರಮವಾಗಿ ಸರಕಾರದ ಅಮೂಲ್ಯ ಉಪಖನಿಜವಾದ ಕಟ್ಟಡ ಕಲ್ಲನ್ನು ಯಾವುದೇ ಪರವಾನಿಗೆ ಇಲ್ಲದೆ ಹಾಗೂ ಸರಕಾರಕ್ಕೆ ರಾಜಸ್ವ ಸಂದಾಯ ಮಾಡದೆ ಗಣಿಗಾರಿಕೆ ಹಾಗೂ ಸಾಗಾಣಿಕೆ ಮಾಡುತ್ತಿರುವುದು ದೃಢಪಟ್ಟಿರುವುದರಿಂದ Iಜ್ಞಿಛಿo – Iಜ್ಞಿಛ್ಟಿZo (ಈಛಿqಛ್ಝಿಟmಞಛ್ಞಿಠಿ Zb ಛಿಜ್ಠ್ಝZಠಿಜಿಟ್ಞ) ಅಠಿ ೧೯೫೭ (ಅಞಛ್ಞಿbಞಛ್ಞಿಠಿ ೨೦೧೫) ರ ಕಲಂ ೪, ೪(೧೪) Z ಓZZಠಿZhZ Iಜ್ಞಿಟ್ಟ Iಜ್ಞಿಛ್ಟಿZo ಇಟ್ಞ್ಚಛಿooಜಿಟ್ಞ ಛಿo ೧೯೯೪ (ಅಞಛ್ಞಿbಞಛ್ಞಿಠಿ ಛಿo ೨೦೨೩) ರ ನಿಯಮ ೩(೧), ೪೨(೧), ೪೩ ಮತ್ತು ೪೪ ಗಳ ಶಿಕ್ಷೆಗೆ ಬದ್ಧರಾದ ಅಪರಾಧವೆಸಗಿರುವುದು ದೃಢಪಟ್ಟಿರುವುದರಿಂದ ಆರೋಪಿತರ ವಿರುದ್ಧ ಸಲ್ಲಿಸಿದ ಫಿರ್ಯಾದಿಯಾಗಿದೆ. IIಈ ಅಠಿ ೧೯೫೭ (ಅಞಛ್ಞಿbಞಛ್ಞಿಠಿ ೨೦೧೫ ರ ಕಲಂ ೨೨ ರನ್ವಯ ಅಡಿ.P.ಅ ೨೦೦ರಡಿಯಲ್ಲಿ ನ್ಯಾಯಾಲಯದಲ್ಲಿ ದೂರು ನೀಡಲು ಅಧಿಕಾರ ಹೊಂದಿದ್ದು ಅನಧಿಕೃತವಾಗಿ ಕಟ್ಟಡಕಲ್ಲು ಗಣಿಗಾರಿಕೆ ನಡೆಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಅವರಿಗೆ ಶಿಕ್ಷೆ ನೀಡಬೇಕಾಗಿ ನಿವೇಸಿಸಲಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಪೊಲೀಸ್ ಕಸ್ಟಡಿಯಲ್ಲಿದ್ದ ಶಶಿರಾಜ್ ಶೆಟ್ಟಿಗೆ ನ್ಯಾಯಾಂಗ ಬಂಧನ ತಲೆ ಮರೆಸಿಕೊಂಡಿರುವ ಪ್ರಮೋದ್‌ಗೆ ಶೋಧ ಮುಂದುವರಿಸಿದ ಪೊಲೀಸರು:

ಮೇಲಂತಬೆಟ್ಟು ಗ್ರಾಮದ ಮೂಡಲದಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಆರೋಪದಡಿ ಬೆಳ್ತಂಗಡಿ ಠಾಣಾ ಪೊಲೀಸರಿಂದ ಮೇ ೧೮ರಂದು ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿದ್ದ ತಾಲೂಕು ಬಿಜೆಪಿ ಯುವಮೋರ್ಚಾದ ಅಧ್ಯಕ್ಷ ಶಶಿರಾಜ್ ಶೆಟ್ಟಿ(೩೫ವ)ಯವರನ್ನು ಮೇ ೨೪ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಹೆಚ್ಚಿನ ತನಿಖೆಗಾಗಿ ನ್ಯಾಯಾಲಯ ಅವರಿಗೆ ಪೊಲೀಸ್ ಕಸ್ಟಡಿ ವಿಧಿಸಿತ್ತು. ಕಸ್ಟಡಿಯಲ್ಲಿದ್ದ ವೇಳೆ ಶಶಿರಾಜ್ ಶೆಟ್ಟಿಯವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯ ವೈದ್ಯರು ಮಂಗಳೂರಿನ ಆಸ್ಪತ್ರೆಗೆ ಕಳುಹಿಸುವಂತೆ ಸೂಚಿಸಿದ್ದ ಹಿನ್ನಲೆಯಲ್ಲಿ ಶಶಿರಾಜ್ ಶೆಟ್ಟಿಯವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮೇ.೨೭ರಂದು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಧೀಶರು ಶಶಿರಾಜ್ ಶೆಟ್ಟಿಗೆ ಮೇ.೨೯ರವರೆಗೆ ಪೊಲೀಸ್ ಕಸ್ಟಡಿ ವಿಧಿಸಿದ್ದರು. ಕಸ್ಟಡಿಯಲ್ಲಿರುವ ವೇಳೆ ಶಶಿರಾಜ್ ಶೆಟ್ಟಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿ ಮಾಹಿತಿ ಸಂಗ್ರಹಿಸಿರುವ ಪೊಲೀಸರು ಮೇ.೨೯ರಂದು ಮಧ್ಯಾಹ್ನ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಈ ವೇಳೆ ನ್ಯಾಯಾಧೀಶರು ಶಶಿರಾಜ್‌ಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಶಶಿರಾಜ್ ಶೆಟ್ಟಿ ಪರ ವಕೀಲ ಸುಬ್ರಹ್ಮಣ್ಯ ಕುಮಾರ್ ಅಗರ್ತ ಮತ್ತು ಸರಕಾರದ ಪರವಾಗಿ ಎಪಿಪಿಗಳಾದ ದಿವ್ಯರಾಜ್ ಹೆಗ್ಡೆ ಪುತ್ತೂರು ಮತ್ತು ಅಶಿತಾ ಹಾಜರಿದ್ದರು.
ಶಶಿರಾಜ್ ಶೆಟ್ಟಿ ಜಾಮೀನು ಕೋರಿ ಮಂಗಳೂರು ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿ ವಿಚಾರಣೆ ಮೇ.೩೦ರಂದು ನಡೆಯಲಿದೆ.
ತಲೆ ಮರೆಸಿಕೊಂಡಿರುವ ಪ್ರಮುಖ ಆರೋಪಿ ಪ್ರಮೋದ್ ದಿಡುಪೆ ಎಂಬವರ ಪತ್ತೆಗಾಗಿ ಶೋಧ ಮುಂದುವರಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರಮೋದ್ ಅವರು ನಿರೀಕ್ಷಣಾ ಜಾಮೀನು ಪಡೆಯಲು ಮಂಗಳೂರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವುದಾಗಿ ಮಾಹಿತಿ ಲಭ್ಯವಾಗಿದೆ.

ಶಶಿರಾಜ್ ಶೆಟ್ಟಿಯವರ ಅಜ್ಜಿ ಹೇಮಾವತಿ ಶೆಟ್ಟಿ ಹೃದಯಾಘಾತದಿಂದ ನಿಧನ:

ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಆರೋಪದಡಿ ಬಂಧಿತರಾಗಿರುವ ಮೇಲಂತಬೆಟ್ಟು ಗ್ರಾಮದ ಕಡಂಬು ನಿವಾಸಿ, ಬಿಜೆಪಿ ಯುವಮೋರ್ಚಾದ ತಾಲೂಕು ಅಧ್ಯಕ್ಷ ಶಶಿರಾಜ್ ಶೆಟ್ಟಿಯವರ ಅಜ್ಜಿ ಪೆರ್ನೆ ಮುಂಡೋವಿನಕೋಡಿಯ ಹೇಮಾವತಿ ಶೆಟ್ಟಿ(೭೬ವ)ರವರು ಹೃದಯಾಘಾತಕ್ಕೀಡಾಗಿ ಮೇ ೨೬ರಂದು ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಶಶಿರಾಜ್ ಶೆಟ್ಟಿಯವರನ್ನು ಬಹುವಾಗಿ ಪ್ರೀತಿಸುತ್ತಿದ್ದ ಹೇಮಾವತಿ ಶೆಟ್ಟಿಯವರು ಕಳೆದ ಕೆಲವು ದಿನಗಳಿಂದ ತೀರಾ ಮಂಕಾಗಿದ್ದರು. ಪದೇ ಪದೇ ಶಶಿರಾಜ್ ಎಲ್ಲಿದ್ದಾನೆ ಎಂದು ಕೇಳುತ್ತಿದ್ದರು. ಅವನನ್ನು ನೋಡಬೇಕು ಎಂದು ಹೇಮಾವತಿ ಶೆಟ್ಟಿ ಹೇಳುತ್ತಿದ್ದರು. ಶಶಿರಾಜ್ ಶೆಟ್ಟಿಯವರನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ತಿಳಿದ ಬಳಿಕ ಹೇಮಾವತಿ ಶೆಟ್ಟಿ ತೀವ್ರವಾಗಿ ನೊಂದುಕೊಂಡಿದ್ದರು. ಅರೋಗ್ಯದಿಂದಿದ್ದ ಹೇಮಾವತಿ ಶೆಟ್ಟಿಯವರು ಮೇ ೨೬ರಂದು ದಿಢೀರ್ ಹೃದಯಾಘಾತಕ್ಕೀಡಾಗಿ ನಿಧನರಾದರು. ಮೃತರು ಮಕ್ಕಳಾದ ಪುಷ್ಪಲತಾ ಶೆಟ್ಟಿ, ಜಯಂತಿ ಶೆಟ್ಟಿ, ಶ್ಯಾಮಲ ಶೆಟ್ಟಿ, ಸತೀಶ್ ಶೆಟ್ಟಿ, ಕಿರಣ್ ಶೆಟ್ಟಿ, ಅಳಿಯಂದಿರಾದ ಪುರಂದರ ಶೆಟ್ಟಿ, ಪದ್ಮನಾಭ ಶೆಟ್ಟಿ, ಸೊಸೆಯಂದಿರಾದ ರೇಖಾ ಶೆಟ್ಟಿ, ಸುರೇಖಾ ಶೆಟ್ಟಿ, ನಳಿನಿ ಶೆಟ್ಟಿ, ಮೊಮ್ಮಕ್ಕಳಾದ ಪುಷ್ಪರಾಜ್ ಶೆಟ್ಟಿ, ಶಶಿರಾಜ್ ಶೆಟ್ಟಿ, ಶ್ರೀರಾಜ್ ಶೆಟ್ಟಿ, ಶ್ರೇಯಾ ಶೆಟ್ಟಿ, ಶಿಲ್ಪಾ ಶೆಟ್ಟಿ, ಸಹನಾ ಶೆಟ್ಟಿ, ಆಶಿತಾ ಶೆಟ್ಟಿ, ಅಕ್ಷಯ್ ಶೆಟ್ಟಿ, ಅಕ್ಷತಾ ಶೆಟ್ಟಿ, ಆದಿತ್ಯ ಶೆಟ್ಟಿ, ವಿದ್ವತ್ ಶೆಟ್ಟಿ, ಹೃನ್ಮಯಿ ಶೆಟ್ಟಿ, ಅತ್ರೇಯ ಶೆಟ್ಟಿ, ಧನ್ವಿ ಶೆಟ್ಟಿ, ಧಿಯ ಶೆಟ್ಟಿ, ಮರಿಮಕ್ಕಳಾದ ಹಿಮಾನಿ ಶೆಟ್ಟಿ, ಕಶ್ವಿ ಶೆಟ್ಟಿ, ಧ್ಯಾನ ಶೆಟ್ಟಿ ಮತ್ತು ಪ್ರದ್ಯುಮ್ನ ಶೆಟ್ಟಿಯವರನ್ನು ಅಗಲಿದ್ದಾರೆ.

Exit mobile version