Site icon Suddi Belthangady

ಉಜಿರೆ: ಎಸ್.ಡಿ.ಎಂ ಐ.ಟಿ ಯಲ್ಲಿ ಬೀಳ್ಕೊಡುಗೆ ಸಮಾರಂಭ

ಉಜಿರೆ: ಎಸ್.ಡಿ.ಯಂ ತಾಂತ್ರಿಕ ಮಹಾವಿದ್ಯಾಲಯವು ಮೇ 24ರಂದು ತನ್ನ 2023-24ನೇ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಆಯೋಜಿಸಿತ್ತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಐಟಿ ಮತ್ತು ಹಾಸ್ಟೆಲ್ ವಿಭಾಗದ ಕಾರ್ಯ ನಿರ್ವಾಹಣಾ ಅಧಿಕಾರಿ ಪೂರಣ್ ವರ್ಮ ವಿದ್ಯಾರ್ಥಿಗಳೊಂದಿಗೆ ಮಾತನಾಡುತ್ತಾ, ಸಹೋದ್ಯೋಗಿ ಗಳು ಮತ್ತು ಸ್ನೇಹಿತರೊಂದಿಗೆ ಉತ್ತಮ ಸಂಪರ್ಕ-ಸಂವಹನ  ಬೆಳೆಸಿಕೊಳ್ಳುವುದರಿಂದ ಸತತವಾಗಿ‌ ಬದಲಾಗುತ್ತಿರುವ ತಾಂತ್ರಿಕ ವಿಷಯವನ್ನು ಹಾಗೂ ಅವಕಾಶಗಳನ್ನು ತಿಳಿದುಕೊಳ್ಳಲು ನೆರವಾಗುತ್ತದೆ ಎಂದು ನುಡಿದರು.

ಮೆಕ್ಯಾನಿಕಲ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಬಸವ ಸ್ವಾಗತಿಸಿದರು.ಅಂತಿಮ ವರ್ಷದ ವಿದ್ಯಾರ್ಥಿಗಳು ತಮ್ಮ ಅನಿಸಿಕೆ ಹಂಚಿಕೊಂಡರು.

ಪ್ರಾಚಾರ್ಯ ಡಾ.ಅಶೋಕ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದು, ಡಾ.ಗಿರೀಶ್ ಕುಮಾರ್ ವಂದನಾರ್ಪಣೆಗೈದರು.

ಕಾರ್ಯಕ್ರಮವನ್ನು ಇಲೆಕ್ಟ್ರಾನಿಕ್ಸ್ ವಿಭಾಗದ ಪ್ರೊ.ಸಂದೀಪ್ ನಿರ್ವಹಿಸಿದರು.

Exit mobile version