Site icon Suddi Belthangady

ಪಡಂಗಡಿ: ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೃಢಕಲಶಾಭಿಷೇಕ ಹಾಗೂ ಚಂಡಿಕಾಯಾಗ

ಪಡಂಗಡಿ: ಪಡಂಗಡಿ ಗ್ರಾಮದ ಇತಿಹಾಸ ಪ್ರಸಿದ್ಧ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮೇ 30ರಂದು ದೃಢಕಲಶಾಭಿಷೇಕ ಹಾಗೂ ಚಂಡಿಕಾಯಾಗವು ಪ್ರಧಾನ ಅರ್ಚಕ ರಘುರಾಮ ಭಟ್ ಮಠ ಅವರ ಉಪಸ್ಥಿತಿಯಲ್ಲಿ, ತಂತ್ರಿಗಳಾದ ಉದಯ ಪಾಂಗಣ್ಣಾಯರ ನೇತೃತ್ವದಲ್ಲಿ ವಿವಿಧ ವೈಧಿಕ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.

ಮೇ 29ರಂದು ಸಂಜೆ 5ರಿಂದ ರಾಕ್ಷೆಘ್ನ ಹೋಮ ವಾಸ್ತು ಹೋಮ ನಡೆಯಿತು.

ಮೇ 30ರಂದು ಕಲಶಾಧಿವಾಸ, ಅಧಿವಾಸ ಹೋಮ, ಚಂಡಿಕಾಯಾಗ, ಮಹಾಪೂಜೆ ಜರಗಿತು.

ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳು, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು, ಸದಸ್ಯರುಗಳು ಉಪಸ್ಥಿತರಿದ್ದರು.

Exit mobile version