Site icon Suddi Belthangady

ಬೆಳ್ತಂಗಡಿ: ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶೈಕ್ಷಣಿಕ ಕಾರ್ಯಾಗಾರ

ಬೆಳ್ತಂಗಡಿ: ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮೇ 27, 28ರಂದು ಶಿಕ್ಷಕರಿಗೆ ಪುನಶ್ಚೇತನ ಶೈಕ್ಷಣಿಕ ಕಾರ್ಯಾಗಾರವನ್ನು ನಡೆಸಲಾಯಿತು.

ಭಾರತೀಯ ಕಥೋಲಿಕ ಯುವ ಸಂಚಲನ ಮಂಗಳೂರು ಇದರ ನಿರ್ದೇಶಕ ವಂ.ಫಾ.ಅಶ್ವಿನ್ ಲೋಹಿತ್ ಕಾರ್ಡೋಜ ರವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದರು.

ಶಾಲಾ ಮುಖ್ಯೋಪಾಧ್ಯಾಯ ವಂ.ಫಾ.ಕ್ಲಿಫರ್ಡ್ ಪಿಂಟೋರವರು ಸಂಪನ್ಮೂಲ ವ್ಯಕ್ತಿಯವರನ್ನು ಪರಿಚಯಿಸಿದರು.

ಶಾಲಾ ಸಂಚಾಲಕ ವಂ.ಫಾ.ವೋಲ್ಟರ್ ಡಿಮೆಲ್ಲೋರವರು ಹತ್ತನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ನೂರು ಶೇಕಡಾ ಫಲಿತಾಂಶವನ್ನು ಪಡೆಯಲು ಶ್ರಮವಹಿಸಿದ ಶಿಕ್ಷಕ ವೃಂದವನ್ನು ಅಭಿನಂದಿಸಿ ನೂತನ ಶೈಕ್ಷಣಿಕ ವರ್ಷಕ್ಕೆ ಶುಭ ಹಾರೈಸಿದರು.

ಶಿಕ್ಷಣ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆ, ಆಧುನಿಕ ತಂತ್ರಜ್ಞಾನದ ಬಳಕೆ ಮತ್ತು ಇಂದಿನ ಮಕ್ಕಳ ಕಲಿಕಾ ಮಟ್ಟಕ್ಕೆ ಅನುಗುಣವಾಗಿ ಕಲಿಕೆ ಮತ್ತು ಬೋಧನೆಯಲ್ಲಿ ನೂತನ ತಂತ್ರಾಂಶಗಳನ್ನು ಬಳಸಿಕೊಳ್ಳುವುದನ್ನು ಆಕರ್ಷಣೀಯ, ಆಸಕ್ತಿದಾಯಕ ಆಟಗಳು ಮತ್ತು ಹಾಡುಗಳ ಮೂಲಕ ತಿಳಿಸಿದರು.

ಶಿಕ್ಷಕರು ಬೋಧನೆಯಲ್ಲಿ ಸೃಜನಾತ್ಮಕತೆ, ಜ್ಞಾನ ಹಾಗೂ ತಮ್ಮ ಪ್ರತಿಭೆಗಳಿಂದ ತರಗತಿಯ ಪರಿಸರವನ್ನು ಕ್ರಿಯಾಶೀಲವಾಗಿ ಪರಿವರ್ತಿಸಲು ಸಲಹೆ ನೀಡಿದರು.

ಶಿಕ್ಷಕರು ಎರಡು ದಿನಗಳ ಕಾರ್ಯಾಗಾರದಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಸಹಶಿಕ್ಷಕಿ ಪ್ರೀತ ಡಿಸೋಜ ಕಾರ್ಯಾಗಾರದ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಬ್ಲೆಂಡಿನ್ ರೊಡ್ರಿಗಸ್ ವಂದಿಸಿದರು.

Exit mobile version