Site icon Suddi Belthangady

ಕೊಕ್ಕಡ ವಲಯದ ಬರೆಂಗಾಯದಲ್ಲಿ ಪ್ರಗತಿ-ಬಂದು ಸ್ವ-ಸಹಾಯ ಸಂಘಗಳ ಒಕ್ಕೂಟದ ತ್ರೈಮಾಸಿಕ ಸಭೆ

ಬರೆಂಗಾಯ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಬೆಳ್ತಂಗಡಿ ತಾಲೂಕಿನ ಪ್ರಗತಿ ಬಂದು ಸ್ವ-ಸಹಾಯ ಸಂಘಗಳ ಒಕ್ಕೂಟ ಬರೆಂಗಾಯದ ತ್ರೈಮಾಸಿಕ ಸಭೆಯು ಒಕ್ಕೂಟದ ಅಧ್ಯಕ್ಷ ಮಾದಪ್ಪ ಗೌಡರವರ ಅಧ್ಯಕ್ಷತೆಯಲ್ಲಿ ಬರೆoಗಾಯ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ತ್ರೈಮಾಸಿಕ ಸಭೆಯ ಜವಾಬ್ದಾರಿಯನ್ನು ಸುರಕ್ಷಾ ಬಿ, ಶ್ರೀರಕ್ಷಾ ಬಿ ಸಂಘವು ವಹಿಸಿಕೊಂಡಿದ್ದು, ಜವಾಬ್ದಾರಿ ಸಂಘದ ಸಾಧನೆಯ ವರದಿಯನ್ನು ವಾರಿಜಾ ಮತ್ತು ಲಲಿತಾರವರು ಮಂಡಿಸಿದರು.

ಒಕ್ಕೂಟದ ಗತ ಸಭೆಯ ವರದಿಯನ್ನು ಶೋಭಾರವರು ಮಂಡಿಸಿದರು.

ತಾಲೂಕಿನ ಕೃಷಿ ಅಧಿಕಾರಿ ರಾಮ್ ಕುಮಾರ್ ರವರು ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಹಾಗೂ ಕೃಷಿಯನ್ನು ಆಧುನಿಕವಾಗಿ ಅನುಷ್ಠಾನಿಸುವ ಬಗ್ಗೆ ಮಾಹಿತಿಯನ್ನು ನೀಡಿದರು.

ವಲಯ ಮೇಲ್ವಿಚಾರಕಿ ಭಾಗೀರಥಿಯವರು ಹಾಗು ಮಾಜಿ ಒಕ್ಕೂಟದ ಅಧ್ಯಕ್ಷರು, ಒಕ್ಕೂಟದ ಪದಾಧಿಕಾರಿಗಳು, ದಾಖಲಾತಿ ಸಮಿತಿಯ ಸದಸ್ಯರು, ಎಲ್ಲಾ ಸಂಘದ ಸದಸ್ಯರು, ಸೇವಾಪ್ರತಿನಿಧಿ ಆಶಾಲತಾ ರವರು ಉಪಸ್ಥಿತರಿದ್ದರು.

ಲಲಿತಾ ಕಾರ್ಯಕ್ರಮ ಸ್ವಾಗತಿಸಿ, ಧನ್ಯವಾದವಿತ್ತರು.

Exit mobile version