Site icon Suddi Belthangady

ಬೆಳ್ತಂಗಡಿ ವಲಯದ ಕ್ಯಾಥೊಲಿಕ್ ಸಭಾದ ವಲಯಾಧ್ಯಕ್ಷರಾಗಿ ಲಿಯೋ ರೊಡ್ರಿಗಸ್, ಕಾರ್ಯದರ್ಶಿಯಾಗಿ ಫಿಲಿಪ್ ಡಿಕುನ್ಹ ನೇಮಕ

ಬೆಳ್ತಂಗಡಿ: ಬೆಳ್ತಂಗಡಿ ಕ್ಯಾಥೊಲಿಕ್ ಸಭಾ ವಲಯದ ಪದಾಧಿಕಾರಿಗಳ ಆಯ್ಕೆಯು ಮೇ 26ರಂದು ಬೆಳ್ತಂಗಡಿ ಚರ್ಚ್ ಸಭಾಂಗಣದಲ್ಲಿ ಜರಗಿತು.

ಆಧ್ಯಾತ್ಮಿಕ ನಿರ್ದೇಶಕ ವಂ.ಫಾ.ವಾಲ್ಟರ್ ಡಿಮೆಲ್ಲೊ, ಚುನಾವಣಾಧಿಕಾರಿಯಾಗಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ರೊಲ್ವಿನ್ ಡಿ’ಕೋಸ್ತಾ ನೆರವೇರಿಸಿದರು.

ಅಧ್ಯಕ್ಷರಾಗಿ ಲಿಯೋ ರೊಡ್ರಿಗಸ್, ಕಾರ್ಯದರ್ಶಿಯಾಗಿ ಫಿಲಿಪ್ ಡಿಕುನ್ಹ, ಉಪಾಧ್ಯಕ್ಷರಾಗಿ ಸುನಿಲ್ ಅಲ್ಬರ್ಟ್ ಮೋನಿಸ್, ಕೋಶಾಧಿಕಾರಿಯಾಗಿ ಅರುಣ್ ಫೆರ್ನಾಂಡಿಸ್, ಸಹ ಕೋಶಾಧಿಕಾರಿಯಾಗಿ ಫೆಡ್ರಿಕ್ ಡಿಕೋಸ್ತ, ಜೊತೆ ಕಾರ್ಯದರ್ಶಿಯಾಗಿ ವಾಲ್ಟರ್ ಕ್ರಾಸ್ತಾ, ಸಂದೇಶ್, ಪತ್ರಿಕಾ ಪ್ರತಿನಿಧಿಯಾಗಿ ಫ್ರಾನ್ಸಿಸ್ ಡಿಸೊಜಾ, ಸ್ತ್ರೀ ಹಿತ ಸಂಚಾಲಕಿಯಾಗಿ ಐರಿನ್ ಸಿಕ್ವೇರಾ, ರಾಜಕೀಯ ಸಂಚಾಲಕರಾಗಿ ವಿನ್ಸೆಂಟ್ ಡಿ’ಸೊಜಾ, ಸಮುದಾಯ ಅಭಿವೃದ್ಧಿ ಸಂಚಾಲಕರಾಗಿ ವಿಲಿಯಂ ಕೊರ್ಡೆರೋ, ಯುವ ಹಿತ ಸಂಚಾಲಕರಾಗಿ ಸ್ಟೇನಿ ಪಿಂಟೊ, ನಿಕಟ ಪೂರ್ವ ಅಧ್ಯಕ್ಷರಾಗಿ ಎಡ್ವರ್ಡ್ ರೇಗೊ ಆಯ್ಕೆಯಾಗಿದ್ದಾರೆ.

Exit mobile version