Site icon Suddi Belthangady

ಅರಸಿನಮಕ್ಕಿ: ಎಸ್.ಕೆ.ಡಿ.ಆರ್.ಡಿ.ಪಿ ರೆಖ್ಯ ಕಾರ್ಯ ಕ್ಷೇತ್ರದ ನೇಲ್ಯಡ್ಕ ಒಕ್ಕೂಟದ ತ್ರೈಮಾಸಿಕ ಸಭೆ

ರೆಖ್ಯ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ರೆಖ್ಯ ಕಾರ್ಯಕ್ಷೇತ್ರದ ನೇಲ್ಯಡ್ಕ ಒಕ್ಕೂಟದ ತ್ರೈಮಾಸಿಕ ಸಭೆಯು ನೇಲ್ಯಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ನೇಲ್ಯಡ್ಕ ಒಕ್ಕೂಟದ ಅಧ್ಯಕ್ಷರಾದ ನಳಿನಿ, ಒಕ್ಕೂಟದ ಪದಾಧಿಕಾರಿಗಳು, ಶ್ರೀ.ಕ್ಷೇ.ಧ.ಗ್ರಾ.ಯೋ. ಅರಸಿನಮಕ್ಕಿ ವಲಯದ ಮೇಲ್ವಿಚಾರಕಿ ಶಶಿಕಲಾ, ಸೇವಾಪ್ರತಿನಿಧಿ ಸೌಮ್ಯ, ಸಂಘದ ಸದಸ್ಯರು ಉಪಸ್ಥಿತರಿದ್ದರು.

ಒಕ್ಕೂಟದ ಬಲವರ್ಧನೆ, ಒಕ್ಕೂಟ ಪದಾಧಿಕಾರಿಗಳ ಜವಾಬ್ದಾರಿ, ಶಾಲಾ ಕೈತೋಟ ರಚನೆ ಮತ್ತು ಯೋಜನೆಯ ಎಲ್ಲಾ ಕಾರ್ಯಕ್ರಮದಲ್ಲಿ ಸದಸ್ಯರು ಭಾಗವಹಿಸುವಂತೆ ಮೇಲ್ವಿಚಾರಕರು ತಿಳಿಸಿದರು.

ಸಂಜೀವ ಗೌಡ ಸ್ವಾಗತಿಸಿ, ಜಯಾನಂದ ಗೌಡ ಧನ್ಯವಾದಗೈದು, ರಾಷ್ಟ್ರಗೀತೆಯೊಂದಿಗೆ ಒಕ್ಕೂಟ ಸಭೆಯನ್ನು ಮುಕ್ತಾಯಗೊಳಿಸಿದರು.

Exit mobile version