Site icon Suddi Belthangady

ಕಡಿರುದ್ಯಾವರದಲ್ಲಿ ಒಂಟಿ ಸಲಗದಿಂದ ತೋಟಗಳಿಗೆ ದಾಳಿ- ಅಪಾರ ಕೃಷಿ ಹಾನಿ

ಕಡಿರುದ್ಯಾವರ: ಕಡಿರುದ್ಯಾವರ ಗ್ರಾಮದ ಹಲವು ಕಡೆ ಒಂಟಿ ಸಲಗ ತೋಟಗಳಿಗೆ ದಾಳಿ ನಡೆಸಿ ಕೃಷಿ ಹಾನಿ ಉಂಟುಮಾಡಿದೆ.

ಮೇ 26ರಂದು ತಡರಾತ್ರಿ ಇಲ್ಲಿನ ಬಸವದಡ್ಡು ಶಂಕರ್ ಭಟ್, ನಡ್ತಂಡ ಮಹೇಶ್ ಭಟ್, ನೀಲಯ್ಯ ಗೌಡ, ಪ್ರವೀಣ್ ಗೌಡ ಮೊದಲಾದವರ ತೋಟಗಳಿಗೆ ನುಗ್ಗಿದ ಸಲಗ ಅಡಿಕೆ, ಬಾಳೆ ಗಿಡಗಳನ್ನು ಮುರಿದು ಹಾಕಿದೆ.

ರಾಮಚಂದ್ರ ಗೌಡ ಎಂಬವರ ಸಾಕು ನಾಯಿ ಆನೆ ಬಳಿ ಬೊಗಳುತ್ತ ಹೋಗಿದ್ದು ಈ ಸಮಯ ಆನೆ ಅವರ ಮನೆ ತನಕ ನಾಯಿಯನ್ನು ಓಡಿಸಿದ್ದು, ಅಂಗಳದಲ್ಲೇ ನಿಂತು ಘೀಳಿಟ್ಟಿದೆ.

ಈ ವೇಳೆ ಮನೆಯವರು ಭೀತರಾದ ಘಟನೆಯೂ ನಡೆಯಿತು.

Exit mobile version