ಬೆಳಾಲು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಬೆಳ್ತಂಗಡಿ, ಅಖಿಲ ಕರ್ನಾಟಕ ಜಿಲ್ಲಾ ಜನ ಜಾಗೃತಿ ವೇದಿಕೆ ಬೆಳ್ತಂಗಡಿ ಇದರ ಸಹಯೋಗದೊಂದಿಗೆ ವಿಶ್ವ ತಂಬಾಕು ವಿರೋಧಿ ದಿನಾಚರಣೆಯ ಕಾರ್ಯಕ್ರಮ ಮೇ 26ರಂದು ಬೆಳಾಲು ಶ್ರೀ ಧ.ಮ.ಪ್ರೌಢ ಶಾಲೆಯಲ್ಲಿ ಹಮ್ಮಿಕೊಳ್ಳಲಾಯಿತ್ತು.
ಕಾರ್ಯಕ್ರಮವನ್ನು ತಾಲೂಕು ಯೋಜನಾಧಿಕಾರಿ ಸುರೇಂದ್ರ ಉದ್ಘಾಟಿಸಿ ಮಾತನಾಡಿ ಜನಜಾಗೃತಿ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿ ದುಶ್ಚಟಕ್ಕೆ ಬಲಿ ಆಗದೇ ನಮ್ಮ ಆರೋಗ್ಯವನ್ನು ನಾವು ಕಾಪಾಡಿಕೊಳ್ಳಬೇಕು ಎಂದು ಮಾಹಿತಿ ನೀಡಿದರು.
ಸಂಪನ್ಮೂಲ ವ್ಯಕಿಯಾಗಿ ಆಗಮಿಸಿದ್ದ ಜನಜಾಗೃತಿ ವೇದಿಕೆಯ ಶಿಬಿರಾಧಿಕಾರಿ ದೇವಿ ಪ್ರಸಾದ್ ಕಾರ್ಯಕ್ರಮದ ಉದ್ದೇಶ, ಮದ್ಯಪಾನದಿಂದಾಗಿ ಸಾವಿನ ಸಂಖ್ಯೆ ಜಾಸ್ತಿ ಆಗುತ್ತಿದೆ, ಒಂದು ಕಾಲದಲ್ಲಿ ಮಧ್ಯಪಾನ ನಿಲ್ಲಿಸಲು ಹೋರಾಟ ಮಾಡುತ್ತಿದ್ದಾರೆ.
ಯಾವುದೇ ಸಭೆ-ಸಮಾರಂಭಗಳಲ್ಲಿ ಮದ್ಯಪಾನ ಮ್ಯೂಸಿಕ್, ಸೌಂಡ್, ಡಾನ್ಸ್ ಇದನ್ನೆಲ್ಲಾ ಕಡಿಮೆ ಮಾಡಿ ಉತ್ತಮವಾಗಿ ಭಜನೆ ಪೂಜಾ ಕಾರ್ಯಕ್ರಮಗಳನ್ನು ನಡೆಸುವುದರ ಮೂಲಕ ಕಾರ್ಯಕ್ರಮಗಳನ್ನು ನೆರವೇರಿಸೋಣ, ಗಾಂಜಾದಿಂದಾಗಿ ಮಕ್ಕಳಲ್ಲಿ ವಿದ್ಯಾಭ್ಯಾಸದಲ್ಲಿ ಕೊರತೆ ಆಹಾರ ಸೇವನೆ ಕಡಿಮೆ ಆಗುತ್ತಿದೆ.
ದೇಹದಲ್ಲಿ ಹಲವಾರು ಬದಲಾವಣೆ ಆಗುತಿದ್ದೆ ಗಾಂಜಾ ಸಿಗದೇ ಇದ್ದಾಗ ಪೆಟ್ರೋಲ್, ಡೀಸೆಲ್, ಹಾಗೆ ಮುಂತಾದವುಗಳನ್ನು ಸೇವನೆ ಮಾಡುತ್ತಾರೆ ಇದು ಯಾವುದು ಸಿಗದೇ ಇದ್ದಾಗ ಜೀವನವನ್ನು ಅಂತ್ಯಗೊಳಿಸುವ ಹಂತಕ್ಕೆ ಬರುತಾರೆ ಎಂದು ಉದಾರಣೆಯೊಂದಿಗೆ ಸಮಗ್ರ ವಾಗಿ ಮಾಹಿತಿ ನೀಡಿದರು.ಅಧ್ಯಕ್ಷತೆಯನ್ನು ತಾಲೂಕು ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ತಿಮ್ಮಪ್ಪಗೌಡ ಬೆಳಾಲು ಶುಭಹಾರೈಸಿದರು.
ಉಜಿರೆ ವಲಯದ ಜನಜಾಗೃತಿ ವೇದಿಕೆಯ ಪದಾಧಿಕಾರಿ ಯೋಗೀಶ್ ಗೌಡ, ಬೆಳಾಲು ಒಕ್ಕೂಟದ ಅಧ್ಯಕ್ಷರು ರತ್ನಾಕರ, ಮಾಜಿ ಅಧ್ಯಕ್ಷ ಸಂಜೀವ ಗೌಡ, ಮಾಯಾ ಒಕ್ಕೂಟದ ಅಧ್ಯಕ್ಷ ಗಂಗಾಧರ ಸಾಲ್ಯಾನ್, ಗ್ರಾಮ ಸಮಿತಿ ಅಧ್ಯಕ್ಷ ಸೂರಪ್ಪ ಗೌಡ ಒಕ್ಕೂಟದ ಪದಾಧಿಕಾರಿಗಳು ಸಂಘದ ಅಧ್ಯಕ್ಷರು ಕಾರ್ಯದರ್ಶಿ ಸದಸ್ಯರು ಉಪಸ್ಥಿತರಿದ್ದರು.
ಉಜಿರೆ ವಲಯದ ಮೇಲ್ವಿಚಾರಕಿ ವನಿತಾ ಕಾರ್ಯಕ್ರಮ ನಿರೂಪಿಸಿ, ಬೆಳಾಲು ಸೇವಾಪ್ರತಿನಿಧಿ ತಾರಾನಾಥ ಸ್ವಾಗತಿಸಿ, ಮಾಯಾ ಸೇವಾಪ್ರತಿನಿಧಿ ಪ್ರಭಾ ಧನ್ಯವಾದವಿತ್ತರು.