Site icon Suddi Belthangady

ಸೌತಡ್ಕ ಮುಖ್ಯ ದ್ವಾರದ ಬಳಿ ನಿರಂತರ ಟ್ರಾಫಿಕ್ ಸಮಸ್ಯೆ- ದ್ವಾರದ ಅಗಲ ಕಿರಿದಾದುದರಿಂದ ದೊಡ್ಡ ಗಾತ್ರದ ವಾಹನ ತಿರುಗಿಸಲು ಪರದಾಟ

ಕೊಕ್ಕಡ : ಧರ್ಮಸ್ಥಳ, ಸೌತಡ್ಕ ದೇವಾಲಯಕ್ಕೆ ಭಕ್ತರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದೂ ಸೌತಡ್ಕ ಮುಖ್ಯ ದ್ವಾರ ಪ್ರವೇಶ ಸಂಧರ್ಭದಲ್ಲಿ ದ್ವಾರ ಕಿರಿದಾದುದರಿಂದ ದೊಡ್ಡ ಗಾತ್ರದ ಬಸ್, ಟೆಂಪೋ ಟ್ರಾವೆಲರ್ ಗಳು ತಿರುವು ಪಡೆದುಕೊಳ್ಳಲು ಕಷ್ಟ ಆಗುತ್ತಿದೆ.

ಎರೆಡೆರಡು ಬಾರಿ ಹಿಂದೆ ಮುಂದೆ ಚಲಿಸಿದ ನಂತರ ದ್ವಾರ ಪ್ರವೇಶಿಸಲು ಸಾಧ್ಯವಾಗುವುದರಿಂದ ನಿತ್ಯ ಈ ಭಾಗದಲ್ಲಿ ಸಂಚರಿಸುವ ಪ್ರಯಾಣಿಕರು ಕಿಲೋಮೀಟರ್ ಕಟ್ಟಲೆ ಟ್ರಾಫಿಕ್ ಜಾಮ್ ನಲ್ಲಿ ನಿಧಾನವಾಗಿ ಚಲಿಸುವ ಸಮಸ್ಯೆ ಉಂಟಾಗುತ್ತಿದ್ದೂ ಕೊಕ್ಕಡ ದಿಂದ ಸೌತಡ್ಕ, ಅರಸಿನಮಕ್ಕಿ, ಶಿಬಾಜೆ, ಶಿಶಿಲ ಪ್ರಯಾಣಿಸುವ ಬಾಡಿಗೆ ರಿಕ್ಷಾದವರಿಗೂ ಇದರಿಂದ ಸಮಸ್ಯೆ ಆಗುತ್ತಿದ್ದೂ ಶೀಘ್ರವೇ ಈ ಸಮಸ್ಯೆಯನ್ನು ಸಂಬಂಧ ಪಟ್ಟ ಇಲಾಖೆ ಯವರು ಗಮನಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಾಗಿ ರಿಕ್ಷಾ ಚಾಲಕರು, ಜೀಪ್ ಚಾಲಕರು, ಕೊಕ್ಕಡ ಗ್ರಾಮಸ್ಥರು ಪ್ರಕಟಣೆಗಾಗಿ ತಿಳಿಸಿರುತ್ತಾರೆ.

Exit mobile version