Site icon Suddi Belthangady

ಕುಕ್ಕೇಡಿಯಲ್ಲಿ ವಸಂತ ಬಂಗೇರರಿಗೆ ನುಡಿ ನಮನ

ಕುಕ್ಕೇಡಿ: ಬೆಳ್ತಂಗಡಿಯ ಶಾಸಕರಾದ ದಿ.ಕೆ.ವಸಂತ ಬಂಗೇರರಿಗೆ ಕುಕ್ಕೇಡಿ-ನಿಟ್ಟಡೆ ಗ್ರಾಮ ಪಂಚಾಯತ್ ಮಟ್ಟದ ಹಾಗೂ ಬಂಗೇರರ ಅಭಿಮಾನಿಗಳ ಆಶ್ರಯದಲ್ಲಿ ನುಡಿ ನಮನ ಕಾರ್ಯಕ್ರಮ ಮೇ 23ರಂದು ಕುಕ್ಕೇಡಿ ಡಾll ಬಿ ಆರ್ ಅಂಬೇಡ್ಕರ್ ಭವನದಲ್ಲಿ ನಡೆಯಿತು.

ಬಂಗೇರರ ಅಭಿಮಾನಿ ಸಿರಿಲ್ ಪಾಯಸ್ ಪಾದೆ ಬಂಗೇರರ ಭಾವಚಿತ್ರಕ್ಕೆ ದೀಪ ಬೆಳಗಿಸಿ, ಹಾಜಿ ಅಬ್ಬಾಸ್ ಗೋಳಿಯಂಗಡಿ ಪುಷ್ಪರ್ಚನೆ ಮಾಡಿದರು, ಗ್ರಾಮ ಪಂಚಾಯತಿನ ಮಾಜಿ ಉಪಾಧ್ಯಕ್ಷ ಅಶೋಕ್ ಪಾಣೂರು ಪ್ರಸ್ತಾವಿಕವಾಗಿ ಮಾತನಾಡಿದರು.

ಪ್ರಮುಖರಾದ ಹಾಗೂ ಬಂಗೇರರ ಅಭಿಮಾನಿಗಳಾದ ಕೃಷ್ಣಪ್ಪ ಪೂಜಾರಿ ಜಾಲದೆ, ದುಗ್ಗಪ್ಪ ಪೂಜಾರಿ, ಸುಂದರ ಕೆ. ಅಮೈ, ಪಂಚಾಯತ್ ಮಾಜಿ ಉಪಾಧ್ಯಕ್ಷ ವಿನ್ನಿಫ್ರೆಡ್ ಮೋನಿಸ್, ನಾರಾಯಣ ಪೂಜಾರಿ ಬೂತೇರು, ಮಾಜಿ ಪಂಚಾಯತ್ ಅಧ್ಯಕ್ಷರು ಹಾಗೂ ಹಾಲಿ ಮತ್ತು ಮಾಜಿ ಪಂಚಾಯತ್ ಸದಸ್ಯರುಗಳು ಬಂಗೇರರ ಒಡನಾಟದ ಬಗ್ಗೆ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕುಕ್ಕೇಡಿ-ನಿಟ್ಟಡೆ ಗ್ರಾಮ ಸಮಿತಿಯ ಅಧ್ಯಕ್ಷರುಗಳಾದ ಸಂತೋಷ್ ಪೂಜಾರಿ ಮಂಜಲೋಕ್ಕು ಮತ್ತು ಸ್ಟೀವನ್ ಮೋನಿಸ್, ಬೂತ್ ಸಮಿತಿಯ ಅಧ್ಯಕ್ಷರುಗಳಾದ ಸತೀಶ್ ಅಂಚನ್ ಕುಕ್ಕೇಡಿ ಮತ್ತು ನವೀನ್ ಅಮೈ, ಪಡಂಗಡಿ ಹಾಲು ಉತ್ಪದಕರ ಸಂಘದ ಅಧ್ಯಕ್ಷ ಮೆಕ್ಸಿಮ್ ಸಿಕ್ವೆರಾ, ಕೆಡಿಪಿ ಸದಸ್ಯ ಮೆಲ್ವಿನ್ ಸಿಕ್ವೆರಾ, ಪಕ್ಷದ ಮುಖಂಡ ಹೃಷಿಕೇಶ್ ಜೈನ್ ಹಾಗೂ ಪಕ್ಷದ ಹಿರಿಯ ಮುಖಂಡರುಗಳು, ಬಂಗೇರರ ಅಭಿಮಾನಿಗಳು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶೇಖರ್ ಕುಕ್ಕೇಡಿ ಬಂಗೇರರ ಜೀವನಚರಿತ್ರೆ ಬಗ್ಗೆ ಹಾಗೂ ಅವರು ಮಾಡಿದ ತಾಲೂಕಿನ ಮತ್ತು ಕುಕ್ಕೇಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿವರವಾಗಿ ತಿಳಿಸಿ ಧನ್ಯವಾದವಿತ್ತರು.

ಕಾರ್ಯಕ್ರಮವನ್ನು ನಿಟ್ಟಡೆ ಗ್ರಾಮ ಸಮಿತಿಯ ಕಾರ್ಯದರ್ಶಿ ದಿನೇಶ್ ಕುಕ್ಕೇಡಿ ಸ್ವಾಗತಿಸಿ, ನಿರ್ವಹಿಸಿದರು.

Exit mobile version