Site icon Suddi Belthangady

ಉಜಿರೆ: ಎಸ್ ಡಿ ಎಮ್ ನ್ಯಾಚುರೋಪತಿ ಕಾಲೇಜಿನಲ್ಲಿ ರಕ್ತದಾನ ಶಿಬಿರ

ಉಜಿರೆ: ಉಜಿರೆಯ ಎಸ್ ಡಿ ಎಮ್ ನ್ಯಾಚುರೊಪತಿ ಕಾಲೇಜಿನ ಎನ್ ಎಸ್ ಎಸ್ ವಿಭಾಗ ಹಾಗೂ ಮಂಗಳೂರಿನ ಸರಕಾರಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರ ನಡೆಯಿತು.

ಶಿಬಿರದ ಉದ್ಘಾಟನೆಯನ್ನು ನ್ಯಾಚುರೋಪತಿ ಕಾಲೇಜಿನ ಪ್ರಾಂಶುಪಾಲ ಡಾ.ಪ್ರಶಾಂತ್ ಶೆಟ್ಟಿ ಮಾತನಾಡುತ್ತಾ ಈ ರಕ್ತದಾನ ಶಿಬಿರವು ನಮ್ಮ ಕಾಲೇಜಿನಲ್ಲಿ ಕಳೆದ ಹಲವಾರು ದಶಕಗಳಿಂದ ನಡೆಯುತ್ತಿದ್ದು ದಾನಗಳಲ್ಲಿರಕ್ತದಾನವು ಶ್ರೇಷ್ಠದಾನ ಇದನ್ನು ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ನೀಡಿ ಸಮಾಜದ ಒಳಿತಿಗೆ ಕಾರಣೀಭೂತರಾಗಬೇಕೆಂದು ಶುಭನುಡಿ ವಾಚಿಸಿದರು.

ವೇದಿಕೆಯಲ್ಲಿ ಮಂಗಳೂರಿನ ಸರಕಾರಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಡಾ.ಅಶೋಕ್ ಹಾಗೂ ಕಾಲೇಜಿನ ಎನ್ ಎಸ್ ಎಸ್ ಅಧಿಕಾರಿ ಧರ್ಮೇಂದ್ರ ಕುಮಾರ್, ಡಾ.ಮೇಘನ ಉಪಸ್ಥಿತರಿದ್ದರು.

ವೆನ್ಲಾಕ್ ಆಸ್ಪತ್ರೆಯ ಸುಮಾರು 12 ವೈದ್ಯರು ಈ ಸಂದರ್ಭದಲ್ಲಿ ತಮ್ಮ ಕರ್ತವ್ಯವನ್ನು ನಿರ್ವಹಿಸಿದರು. ಕಾಲೇಜಿನಲ್ಲಿ 84 ಯೂನಿಟ್ ರಕ್ತವನ್ನು ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ನೀಡಿ ಸಹಕರಿಸಿದರು.

Exit mobile version