ಉಜಿರೆ: ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆ (ಸಿ.ಬಿ.ಎ ಸ್.ಇ) ಇಲ್ಲಿ ಶಿಕ್ಷಕರಿಗೆ ಯೋಗ ತರಬೇತಿ ಕಾರ್ಯಕ್ರಮವನ್ನು ಮೇ 21ರಂದು ಪ್ರಕೃತಿ ಚಿಕಿತ್ಸಾಲಯ ವಿಭಾಗದ ಡಾ.ಶಿವಪ್ರಸಾದ್ ಶೆಟ್ಟಿ ಅವರು ಉದ್ಘಾಟಸಿ ಯೋಗವು ನಿಮ್ಮ ಮನಸ್ಸು ಮತ್ತು ದೇಹವನ್ನು ಪುನರುಜ್ಜೀವನಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ.ಪ್ರತಿ ದಿನ ಯೋಗ ಮಾಡುವ ಜನರು ಯೋಗದ ಅವಧಿಯ ನಂತರ ಚೈತನ್ಯವನ್ನು ಅನುಭವಿಸುತ್ತಾರೆ ಎಂದು ಹೇಳುತ್ತಾ ಯೋಗದ ಮಹತ್ವವನ್ನು ತಿಳಿಸಿದರು.
ಡಾ.ವಿಶಾಖ ಹಾಗೂ ಡಾ.ಗೀತಾ ಶಾಲಾ ಶಿಕ್ಷಕರಿಗೆ ಮುಂದಿನ ಮೂರು ದಿನಗಳ ಕಾಲ ಯೋಗ ತರಬೇತಿಯನ್ನು ನೀಡಲಿದ್ದಾರೆ.
ಸಹ ಶಿಕ್ಷಕಿ ಶಾಂತಿ ಜಾರ್ಜ್ ವೇದಿಕೆಯಲ್ಲಿ ಉಪಸ್ಥಿತಿಯಲ್ಲಿದ್ದರು.ಶಿಕ್ಷಕಿ ಮಧುರ ಕಾರ್ಯಕ್ರಮವನ್ನು ನಿರೂಪಿಸಿದರು.