Site icon Suddi Belthangady

ಉಜಿರೆ: ಎಸ್.ಡಿ.ಎಂ. ತಾಂತ್ರಿಕ ಕಾಲೇಜಿನಲ್ಲಿ ಪ್ರಾಜೆಕ್ಟ್ ಎಕ್ಸಿಬಿಷನ್

ಉಜಿರೆ: ಕಠಿಣ ಪರಿಶ್ರಮ, ಪ್ರಯತ್ನದಿಂದ ವಿಶೇಷ ಸಾಧನೆಗಳನ್ನು ಮಾಡಿ ತಾಂತ್ರಿಕ ಆವಿಷ್ಕಾರಗಳನ್ನು ಪ್ರದರ್ಶನಕ್ಕೆ ಅಣಿಗೊಳಿಸಿದ್ದೀರಿ. ಸೃಜನಶೀಲ ಸಂಶೋಧನೆಗಳಿಂದ ಸಮಾಜ ಹಾಗು ಮುಂದಿನ ಪೀಳಿಗೆಗೆ  ವಿಶೇಷ ಕೊಡುಗೆ ನೀಡಿದ್ದೀರಿ. ಅಧ್ಯಯನಕ್ಕೆ ವಿಪುಲ ಅವಕಾಶಗಳಿದ್ದು ಅದನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳುವುದು ಮುಖ್ಯ. ಸಮೂಹದ  ಸಾಧನೆಯಲ್ಲಿ ಗುರಿ ತಲುಪಿ ಗ್ರಾಹಕರಿಗೆ ಉಪಯುಕ್ತ ವಸ್ತುಗಳನ್ನು   ಒದಗಿಸಿದಲ್ಲಿ ನಿಮ್ಮ ಸಾಧನೆ ಹಾಗು ಪರಿಶ್ರಮ ಸಾರ್ಥಖ್ಯ ಪಡೆಯುತ್ತದೆ ಎಂದು ಸಿಂಗಾಪುರದಲ್ಲಿ 16 ವರ್ಷಗಳ ಕಾಲ ತಾಂತ್ರಿಕ ವಿಭಾಗದಲ್ಲಿ ವಿಶೇಷ ಪರಿಣತಿ ಪಡೆದ ತೀರ್ಪುಗಾರ ಆದರ್ಶ ಕಾರಂತ್ ನುಡಿದರು.

ಅವರು ಮೇ 22ರಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಿವಿಧ ವಿಭಾಗದ ವಿದ್ಯಾರ್ಥಿಗಳು ಸಿದ್ಧಪಡಿಸಿದ  ಪ್ರಾಜೆಕ್ಟ್ ಎಕ್ಸಿಬಿಷನ್ ನ್ನು ಉದ್ಘಾಟಿಸಿ ಮಾತನಾಡಿದರು.

ಕಾಲೇಜು ಪ್ರಾಚಾರ್ಯ ಡಾ.ಅಶೋಕಕುಮಾರ್ ಟಿ, ಪ್ರಾಜೆಕ್ಟ್ ಎಕ್ಸಿಬಿಷನ್  ಸಂಯೋಜಕ ಡಾ.ಸತ್ಯನಾರಾಯಣ.ಪಿ ಮತ್ತು ವಿಭಾಗ ಮುಖ್ಯಸ್ಥರಾದ ಡಾ.ತ್ಯಾಗರಾಜು ಜಿ.ಎಸ್, ಡಾ.ರವೀಶ ಪಿ., ಡಾ.ಮಧುಸೂದನ ಕೆ., ಡಾ.ಕೆ.ಮಂಜುನಾಥ್, ಡಾ.ಜಿ.ಪಿ.ಹೆಗ್ಡೆ  ಮತ್ತು ಡಾ.ಗಿರೀಶ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.ದೃತಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಪ್ರಾಜೆಕ್ಟ್ ಎಕ್ಸಿಬಿಷನ್ ನಲ್ಲಿ ವಿದ್ಯಾರ್ಥಿ ಸಮೂಹ  ಸಂಶೋಧಿಸಿ ಸಿದ್ಧಪಡಿಸಿದ 70 ಪ್ರಾಜೆಕ್ಟ್ ಗಳನ್ನು ಪ್ರದರ್ಶನಕ್ಕಿರಿಸಲಾಗಿದ್ದು  ವಿದ್ಯಾರ್ಥಿಗಳು ಅದರ ಕಾರ್ಯಚಟುವಟಿಕೆ, ವಿಶೇಷತೆ ಹಾಗು ಪ್ರಯೋಜನದ ಕುರಿತು ಪ್ರಾತ್ಯಕ್ಷಿಕೆಯೊಂದಿಗೆ ಮಾಹಿತಿ ನೀಡಿದರು.

ವಿವಿಧ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ಪ್ರಾಜೆಕ್ಟ್ ಎಕ್ಸಿಬಿಷನ್ ನಲ್ಲಿ  ಭಾಗವಹಿಸಿ ಅದರ ಅನುಭವ ಪಡೆದರು.

ಹೈಬ್ರಿಡ್ ಸೋಲಾರ್ ಡ್ರೈಯರ್ ಮೂಲಕ  ಸೋಲಾರ್ ವಿದ್ಯುತ್ ಮೂಲಕ ಬೇಳೆಕಾಳುಗಳನ್ನು  ಒಣಗಿಸುವುದು, ವೆಂಟಿಲೇಟರ್ ಮೂಲಕ ಬ್ಲಡ್ ಆಕ್ಸಿಜನ್ ಸೆನ್ಸಾರ್ ,ಅಗ್ರಿಕಲ್ಚರ್ ರೋಬೋಟ್,ಆಟೋಮ್ಯಾಟಿಕ್ ವೆಂಡಿಂಗ್ ಮೆಶಿನ್, ಜಿಟ್ಟರ್ ರಿಡಕ್ಷನ್ ಮೊದಲಾದ 70 ತಾಂತ್ರಿಕ  ಪ್ರೊಜೆಕ್ಟ್ ಗಳನ್ನೂ ವಿದ್ಯಾರ್ಥಿಗಳು ಪ್ರದರ್ಶಿಸಿದರು.

Exit mobile version