ಬೆಳ್ತಂಗಡಿ: ಪುದುವೆಟ್ಟು ಗ್ರಾಮದ ದಡಹಿತ್ತಿಲು ಬಳಿ ಮೇ 21ರಂದು ಮಧ್ಯಾಹ್ನ ಕಾರೊಂದು ಚರಂಡಿಗೆ ಬಿದ್ದು, ಓರ್ವನಿಗೆ ಸಾಮಾನ್ಯ ಗಾಯಗಳಾಗಿವೆ.
ಬೊಳ್ಮನಾರಿನ ನಾರಾಯಣ ನಾಯ್ಕ ಎಂಬವರು ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಧರ್ಮಸ್ಥಳ ಕಡೆಯಿಂದ ಮನೆಗೆ ವಾಪಸ್ ಬರುತ್ತಿರುವಾಗ ಕಾರು ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದಿದೆ.
ಈ ವೇಳೆ ಕಾರಿನಲ್ಲಿದ್ದ ನಾರಾಯಣ ನಾಯ್ಕರ ಅಣ್ಣ ಐತಪ್ಪ ನಾಯ್ಕ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಮಾರುತಿ 800 ಕಾರಿನ ಗಾಜುಗಳು ಪುಡಿಯಾಗಿದ್ದು, ವಾಹನ ಜಖಂಗೊಂಡಿದೆ.