Site icon Suddi Belthangady

ಪೆರ್ಲ: ಅರಸಿನಮಕ್ಕಿ ವಲಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ನ ಪ್ರಗತಿ ಬಂದು ಸ್ವಸಹಾಯ ಸಂಘಕ್ಕೆ ವಾರ್ಷಿಕ ಲೆಕ್ಕ ಪರಿಶೋಧನೆಯ ಗ್ರೇಡಿಂಗ್ ಪತ್ರ ವಿತರಣೆ

ಪೆರ್ಲ: 2024-25ನೇ ಸಾಲಿನ ತಾಲೂಕಿನ ಪ್ರಥಮ ಲೆಕ್ಕ ಪರಿಶೋಧನೆಯನ್ನು ಅರಸಿನಮಕ್ಕಿ ವಲಯದ ಶಿಬಾಜೆ ಕಾರ್ಯಕ್ಷೇತ್ರದ ಪೆರ್ಲ ಒಕ್ಕೂಟದಲ್ಲಿ ಕೇಂದ್ರ ಕಛೇರಿಯ ಗುಂಪು ಪರಿಶೋಧಕ ಆನಂದ ಚಾಲನೆಯನ್ನು ನೀಡಿದರು.

ಈ ಸಂದರ್ಭದಲ್ಲಿ ತಾಲೂಕು ಜನಜಾಗೃತಿ ವೇದಿಕೆಯ ಸದಸ್ಯ ಹೆಚ್.ಎಸ್ ಚೆನ್ನಪ್ಪ ಗೌಡ, ಒಕ್ಕೂಟದ ನಿಕಟಪೂರ್ವ ಅಧ್ಯಕ್ಷೆ ವನಿತಾ ವಿ ಶೆಟ್ಟಿಗಾರ್, ನೂತನ ಅಧ್ಯಕ್ಷ ಅಣ್ಣುಗೌಡ, ಆಂತರಿಕ ಲೆಕ್ಕ ಪರಿಶೋಧಕ ಶಿವರಾಮ್, ವಲಯ ಮೇಲ್ವಚಾರಕಿ ಶಶಿಕಲಾ, ತಂಡದ ಪ್ರಬಂಧಕರು, ಸಂಯೋಜಕರು, ಸದಸ್ಯರು, ಸೇವಾಪ್ರತಿನಿಧಿ ಅರುಣಾ, ಗಣೇಶ್, ಯೋಗೀಶ ಉಪಸ್ಥಿತರಿದ್ದರು.

Exit mobile version