Site icon Suddi Belthangady

ಉಜಿರೆ ಸಂತ ಅಂತೋನಿ ಚರ್ಚ್ ನ ನೂತನ ಧರ್ಮಗುರುಗಳಾಗಿ ವಂ.ಫಾ.ಅಬೆಲ್ ಲೋಬೊ ಅಧಿಕಾರ ಸ್ವೀಕಾರ

ಉಜಿರೆ: ಉಜಿರೆ ಸಂತ ಅಂತೋನಿ ಚರ್ಚ್ ನ ನೂತನ ಧರ್ಮಗುರುಗಳಾಗಿ ಉಪ್ಪಿನಂಗಡಿ ಚರ್ಚ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ ವಂ.ಫಾ.ಅಬೆಲ್ ಲೋಬೊ ಮೇ 20ರಂದು ಅಧಿಕಾರ ಸ್ವೀಕರ ಸಮಾರಂಭ ನಡೆಯಿತು.

ಅಧಿಕಾರ ಸ್ವೀಕಾರ ಕಾರ್ಯಕ್ರಮವನ್ನು ಬೆಳ್ತಂಗಡಿ ವಲಯ ಧರ್ಮಗುರು ಬೆಳ್ತಂಗಡಿ ಹೋಲಿ ರೆಡೀಮರ್ ಚರ್ಚ್ ಧರ್ಮಗುರು, ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ರವರ ಪ್ರತಿನಿಧಿಯಾಗಿ ವಂ.ಫಾ.ವಾಲ್ಟರ್ ಡಿಮೆಲ್ಲೊ ರೀತಿ – ರಿವಾಜಿ ನಡೆಸಿಕೊಟ್ಟರು.

ಚರ್ಚ್ ಪಾಲನಾ ಮಂಡಳಿಯ ಸದಸ್ಯರಿಗೆ ನೂತನ ಧರ್ಮಗುರು ಮೇಣದ ಬತ್ತಿ ಉರುಸಿ ಹಸ್ತಾಂತರಿಸಿದರು.ಈ ಸಂದರ್ಭದಲ್ಲಿ ವರ್ಗಾವಣೆಗೊಳ್ಳಲಿರುವ ವಂ.ಫಾ.ಜೇಮ್ಸ್ ಡಿಸೊಜಾ, ಉಪ್ಪಿನಂಗಡಿಯ ನೂತನ ಧರ್ಮಗುರು ವಂ.ಫಾ.ಜೆರಾಲ್ಡ್ ಡಿಸೊಜಾ, ಸಿಸ್ಟರ್ಸ್ ಆಫ್ ಮೇರಿ ಇಮ್ಯಾಕ್ಯುಲೇಟ್ ಕಾನ್ವೆಂಟ್ ನ ಸುಪೀರಿಯರ್ ಸಿ| ವಲ್ಸ, ಆಯೋಗದ ಸಂಯೋಜಕಿ ಲವೀನಾ ಫೆರ್ನಾಂಡಿಸ್, ಕಾರ್ಯದರ್ಶಿ ಲಿಗೋರಿ ವಾಸ್, ಚರ್ಚ್ ಪಾಲನಾ ಮಂಡಳಿ ಸರ್ವ ಸದಸ್ಯರು, ಕೊಕ್ಕಡ ಚರ್ಚ್ ಧರ್ಮಗುರು ವಂ. ಫಾ. ಅನಿಲ್, ಕಡಬ ಚರ್ಚ್ ಧರ್ಮ ಗುರು ಫಾ.ಪ್ರಕಾಶ್, ನೆಲ್ಯಾಡಿ ಧರ್ಮ ಗುರು ಫಾ.ಅಶ್ವಿನ್ ಹಾಗೂ ಪುತ್ತೂರು ವಲಯ ಧರ್ಮಗುರುಗಳು, ಬೆಳ್ತಂಗಡಿ ವಲಯದ ಇತರ ಧರ್ಮಗುರುಗಳು, ದಯಾಳ್ ಭಾಗ್ ಆಶ್ರಮದ ಧರ್ಮ್ ಗುರು ಫಾ. ವಿನೋದ್ ಮಸ್ಕರೇನ್ಹಸ್, ಫಾ. ಎಡ್ವಿನ್, ಉಪ್ಪಿನಂಗಡಿ ಚರ್ಚ್ ನ ಸಮಸ್ತ ಕ್ರೈಸ್ತ ಭಾಂದವರು ಹಾಗೂ ಉಜಿರೆ ಚರ್ಚ್ ಸಮಸ್ತ ಕ್ರೈಸ್ತ ಭಾಂದವರು ಉಪಸ್ಥಿತರಿದ್ದರು.

ಉಜಿರೆ ಸಂತ ಅಂತೋನಿ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಆಂಟೋನಿ ಫೆರ್ನಾಂಡಿಸ್ ಉಜಿರೆ ಚರ್ಚ್ ನ ಕಿರು ಪರಿಚಯ ನೀಡಿದರು. ಅನುಗ್ರಹ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ವಂ.ಫಾ.ವಿಜಯ್ ಲೋಬೊ ಕಾರ್ಯನಿರ್ವಣೆ ನಿರ್ವಹಿಸಿದರು.

ವಂ.ಫಾ.ಅಬೆಲ್ ಲೋಬೊರವರ ಕಿರು ಪರಿಚಯ: ಇವರು ಕೊಲ್ಲಂಗಾನ ಚರ್ಚ್ ನಲ್ಲಿ ಜಾನ್ ಲೋಬೊ ಮತ್ತು ರೆಮಿಡಿಯ ಡಿಸೋಜ ದಂಪತಿಯ ಪುತ್ರ. ಇವರು ವಿದ್ಯಾಭ್ಯಾಸದ ಬಳಿಕ ಏಪ್ರಿಲ್ 23.1998ರಲ್ಲಿ ಗುರುದೀಕ್ಷೆ ಪಡೆದು 1998-2000 ವರೆಗೆ ಬೆಳ್ತಂಗಡಿಯಲ್ಲಿ 2000-2002ಮಂಗಳೂರು ಬೋಂದೆಲ್ ಚರ್ಚ್ ನಲ್ಲಿ, 2002-2003 ಪುತ್ತೂರು ಚರ್ಚ್ ನಲ್ಲಿ ಸಹಾಯಕ ಧರ್ಮಗುರುಗಳಾಗಿ, 2003-2007 ಪಂಜ ಚರ್ಚ್, 2007-2011ವಾಮದಪದವು, 2011-2018 ಅಳದಂಗಡಿ ಚರ್ಚ್, 2018-2024 ಉಪ್ಪಿನಂಗಡಿ ಚರ್ಚ್ ನಲ್ಲಿ ಕಳೆದ 6 ವರ್ಷ ಗಳ ಕಾಲ ಪ್ರಧಾನ ಧರ್ಮಗುರುಗಳಾಗಿ ಸೇವೆ ಸಲ್ಲಿಸಿ, ಅನೇಕ ಅಭಿವೃದ್ಧಿ ಕೆಲಸಗಳನ್ನು ನಿರ್ವಹಿಸಿ ವರ್ಗಾವಣೆಗೊಂಡು ಇಲ್ಲಿಗೆ ಆಗಮಿಸಿದ್ದಾರೆ.

Exit mobile version