ಶಿಶಿಲ: ಶಿಶಿಲ ಗ್ರಾಮದ ಶ್ರೀ ಶಿಶಿಲೇಶ್ವರ ಸನ್ನಿಧಿಯಲ್ಲಿ ಮೇ 18ರಂದು ಅದ್ಧೂರಿಯಾಗಿ ಶಿಶಿಲೇಶ್ವರ ದೇವರ ರಥೋತ್ಸವವು ಕೆಮ್ಮಿಂಜೆ ಬ್ರಹ್ಮಶ್ರೀ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು.
ರಥೋತ್ಸವದ ದಿನ ಬೆಳಗ್ಗೆ ಅಂಗಣ ಉತ್ಸವಗಳು ನಡೆಯಿತು.ಸಾರ್ವಜನಿಕ ಅನ್ನ ಸಂತರ್ಪಣೆ, ಸಂಜೆ ರಥ ಬೀದಿಯನ್ನು ಶುದ್ಧಗೊಳಿಸಲಾಯಿತು, ರಾತ್ರಿ ಅಂಗಣ ಉತ್ಸವದಲ್ಲಿ ಚಂಡೆ, ಉಡುಕಿ ಸುತ್ತು, ವೇದ ಘೋಷ ಸರ್ವವಾದ್ಯಗಳಿಂದ ಅಂಗಣ ಉತ್ಸವ ನೆರವೇರಿತು.
ರಾತ್ರಿ ಶಿಶಿಲೇಶ್ವರ ದೇವರ ರಥೋತ್ಸವಕ್ಕೆ ಹೋಗುವಾಗ ಕೊಡಮಣಿತ್ತಾಯ ಹಾಗೂ ಕುಮಾರ ದೈವಗಳು ಎದುರುಗೊಂಡು ಪೂರ್ವ ಘಟ್ಟಗಳ ಪ್ರಕಾರ ದೇವರ ಕಾಣಿಕೆ ಸಲ್ಲಿಸಿ ನರ್ತನ ಸೇವೆ ನಡೆಯಿತು.
ರಥಾರೂಢನಾಗಿ ಶಿಶಿಲೇಶ್ವರ ದೇವರ ರಥೋತ್ಸವ ಸಂಜೆಯಿಂದಲೇ ಸುರಿಯುತ್ತಿದ್ದ ಮಳೆಯಲ್ಲೇ ರಥೋತ್ಸವ ನಡೆಯಿತು.
ಆಡಳಿತ ಅಧಿಕಾರಿ ದಿನೇಶ್.ಎಂ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.