Site icon Suddi Belthangady

ಮಚ್ಚಿನ: ಅವೈಜ್ಞಾನಿಕ ರಸ್ತೆ ಕಾಮಗಾರಿ- ಒಂದೇ ಮಳೆಗೆ ಕೊಚ್ಚಿ ಹೋದ‌ ರಸ್ತೆ ಬದಿಯ ಮಣ್ಣು- ಅಪಾಯಕ್ಕೆ ಸಿಲುಕಿದ ಕಾಂಕ್ರೀಟ್ ರಸ್ತೆ, ತಡೆಗೋಡೆ

ಬೆಳ್ತಂಗಡಿ: ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಕೈಗೊಂಡ ನಾಳ-ಸಬರಬೈಲು ರಸ್ತೆ ಕಾಮಗಾರಿ ಮೊದಲ ಮಳೆಗೇ ಅಪಾಯಕ್ಕೆ ಸಿಲುಕಿದೆ. ಗುತ್ತಿಗೆದಾರರು ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ನಾಳ – ಸಬರಬೈಲು ರಸ್ತೆ ಕಾಂಕ್ರೀಟ್ ಕಾಮಗಾರಿ ಇತ್ತೀಚೆಗಷ್ಟೇ ನಡೆದಿದೆ. ಕಾಮಗಾರಿಯ ಭಾಗವಾಗಿ ಹಲವೆಡೆ ಮೋರಿ ಹಾಕಿದ್ದು, ಅದರ ಬದಿ ಯಾವುದೇ ತಡೆಗೋಡೆ ನಿರ್ಮಿಸಿಲ್ಲ.

ಎಲ್ಲೂ ರಸ್ತೆಯ ಬದಿ ವ್ಯವಸ್ಥಿತ ಚರಂಡಿಯನ್ನೂ ನಿರ್ಮಾಣ ಮಾಡಿಲ್ಲ.ಪರಿಣಾಮ, ಮೇ 18ರಂದು ಸುರಿದ ಒಂದೇ ಮಳೆಯಿಂದಾಗಿ ನೀರು ರಸ್ತೆಯಲ್ಲೇ ಹರಿದು ರಸ್ತೆಯ ಬದಿಯ ಮಣ್ಣು ಕರಗಿ, ಅಲ್ಲಲ್ಲಿ ರಸ್ತೆಯ ಅಡಿ ಬಾಯಿ ಬಿಟ್ಟು ಅಪಾಯಕ್ಕೆ ಸಿಲುಕಿದೆ.

ತಕ್ಷಣ ಪರಿಹಾರ ಕಾಮಗಾರಿ ಕೈಗೊಳ್ಳದಿದ್ದರೆ ಕಾಂಕ್ರೀಟ್ ರಸ್ತೆ ಬಿರುಕು ಬಿಟ್ಟು ಕುಸಿದು ಬೀಳುವ ಆತಂಕವಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

Exit mobile version