Site icon Suddi Belthangady

ಉಜಿರೆ ಭಾರತೀಯ ಕ್ಯಾಥೋಲಿಕ್ ಯುವ ಸಂಚಲನ ಅಧ್ಯಕ್ಷರಾಗಿ ಲಾರೆನ್ ಮೋನಿಸ್, ಕಾರ್ಯದರ್ಶಿಯಾಗಿ ಹೆನ್ಸಿ ಮೇಲಿಷಾ ಸೆರಾವೊ ಆಯ್ಕೆ

ಉಜಿರೆ: ಉಜಿರೆ ಸಂತ ಅಂತೋನಿ ಚರ್ಚ್ ನ ಭಾರತೀಯ ಕ್ಯಾಥೋಲಿಕ್ ಯುವ ಸಂಚಲನದ ಪದಾಧಿಕಾರಿಗಳ ಆಯ್ಕೆ ಆಧ್ಯಾತ್ಮಿಕ ನಿರ್ದೇಶಕ ವಂ.ಫಾ.ಜೇಮ್ಸ್ ಡಿ’ಸೊಜಾರವರ ಅದ್ಯಕ್ಷತೆಯಲ್ಲಿ ನಡೆಯಿತು.

ಅಧ್ಯಕ್ಷರಾಗಿ ಲಾರೆನ್ ಮೋನಿಸ್, ಕಾರ್ಯದರ್ಶಿಯಾಗಿ ಹೆನ್ಸಿ ಮೇಲಿಷಾ ಸೆರಾವೊ, ಉಪಾಧ್ಯಕ್ಷರಾಗಿ ಕೋಲಿನ್ ಪಿಂಟೊ, ಮಹಿಳಾ ಉಪಾಧ್ಯಕ್ಷರಾಗಿ ರಿಯೋನ ಡಿಸೊಜಾ, ಸಹ ಕಾರ್ಯದರ್ಶಿ ಮೆಲ್ವಿಟ ವಾಸ್, ಕೋಶಾಧಿಕಾರಿಯಾಗಿ ರೋಸ್ ಪ್ರಿಯಾ ಪಿಂಟೊ, ಪತ್ರಿಕಾ ಪ್ರತಿನಿಧಿ ಸುಮಿತ್ ಮೊರಾಸ್, ರೆಡ್ ಡ್ರಾಪ್ ಪ್ರತಿನಿಧಿ ಮೆರ್ವಿನ್ ಲೋಬೊ, ಸಾಂಸ್ಕೃತಿಕ ಕಾರ್ಯದರ್ಶಿ ಐವನ್ ಪಿಂಟೊ, ಕ್ರೀಡಾ ಕಾರ್ಯದರ್ಶಿ ಲೆಸ್ಟರ್ ಜೋಯೆಲ್ ಡಿಸೋಜ ಆಯ್ಕೆಯಾಗಿದ್ದಾರೆ.

Exit mobile version