Site icon Suddi Belthangady

ತಾಲೂಕಿನ ಯುವ ಮೋರ್ಚಾ ಅಧ್ಯಕ್ಷನ ಬಂಧನಕ್ಕೆ ತೀವ್ರ ಖಂಡನೆ- ಭಾರತೀಯ ಮಜ್ದೂರು ಸಂಘದ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಖಂಡನೆ

ಬೆಳ್ತಂಗಡಿ: ಅಕ್ರಮ ಕಲ್ಲು ಕೋರೆ ದಾಳಿ ಪ್ರಕರಣದಲ್ಲಿ ಭಾಗಿಯಾಗದೆ ಇರುವ ವ್ಯಕ್ತಿಯನ್ನು ಸುಖಾ ಸುಮನ್ನೇ ಪ್ರಕರಣದಲ್ಲಿ ಸೇರಿಸಿ, ನಮ್ಮ ತಾಲೂಕಿನ ಯುವ ನಾಯಕನ ಬಂಧನ ರಾಜಕೀಯ ಪ್ರೇರಿತ ಬಂಧನವಾಗಿದೆ ಇದನ್ನು ಪ್ರಜ್ಞಾವಂತ ನಾಗರೀಕನಾಗಿ ಖಂಡಿಸುತ್ತೇನೆ ಎಂದು ಭಾರತೀಯ ಮಜ್ದೂರ್ ಸಂಘದ ಜಿಲ್ಲಾಧ್ಯಕ್ಷ,ವಕೀಲರು ಆಗಿರುವ ಅನಿಲ್ ಕುಮಾರ್ ಯು ಖಂಡನೆ ವ್ಯಕ್ತಪಡಿಸಿದ್ದಾರೆ.

ಈ ಬಂಧನವನ್ನು ನೋಡುವಾಗ ನಮ್ಮ ತಾಲೂಕಿನಲ್ಲಿ ತಮ್ಮ ಸ್ವಾರ್ಥದ ರಾಜಕಾರಣಕ್ಕಾಗಿ ಬೆಳ್ತಂಗಡಿಯಲ್ಲಿ ಅಶಾಂತಿ, ದ್ವೇಷದ ವಿಷ ಬೀಜ ಬಿತ್ತುವ ಕಾರ್ಯಕ್ಕೆ ರಾಜಕಾರಣಿ ಗಳು ಕೈ ಹಾಕಿದ ಹಾಗೇ ಅನ್ನಿಸುತ್ತಿದೆ, ನಿಮ್ಮ ದ್ವೇಷದ ರಾಜಕಾರಣವನ್ನು ಬಿಟ್ಟು ನೈಜ ರಾಜಕಾರಣ ಮಾಡಿ ಎಂದು ಒತ್ತಾಯ ಮಾಡುತ್ತಾ ಇದ್ದೇನೆ, ಸುಂದರ, ನವ ಬೆಳ್ತಂಗಡಿಗೆ ಕಳಂಕ ತರುವ ಕೆಲಸ ಕಾರ್ಯವನ್ನು ಯಾರೂ ಮಾಡಬೇಡಿ, ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಬಂದೇ ಬರುತ್ತೆ, ನಮ್ಮ ಪರಿವಾರದ ಕಾರ್ಯಕರ್ತನ ಬಂಧನಕ್ಕೆ ನಾವೆಲ್ಲರೂ ಒಟ್ಟಾಗಿ ಖಂಡಿಸುತ್ತೇವೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version