Site icon Suddi Belthangady

ಗಾಳಿ ಮಳೆಗೆ ಬೆಳ್ತಂಗಡಿ ಮೆಸ್ಕಾಂಗೆ 5 ಲಕ್ಷ ರೂ. ನಷ್ಟ

ಬೆಳ್ತಂಗಡಿ: ಅಳದಂಗಡಿ, ನಾರಾವಿ, ಕುದ್ಯಾಡಿ, ಮರೋಡಿ ಮೊದಲಾದ ಕಡೆಗಳಲ್ಲಿ ಮೇ 15ರ ಸಂಜೆ ಮಳೆಯೊಂದಿಗೆ ಗಾಳಿಯು ಬೀಸಿದ ಪರಿಣಾಮ ವಿದ್ಯುತ್ ಕಂಬಗಳು ಹಾಗೂ ಪರಿವರ್ತಕ ನೆಲಕ್ಕುರುಳಿ ಮೆಸ್ಕಾಂಗೆ 5 ಲಕ್ಷ ರೂ. ನಷ್ಟ ಉಂಟಾಗಿದೆ.

ನಾರಾವಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ 4 ಎಚ್‌ಟಿ, 7 ಎಲ್ ಟಿ ಕಂಬಗಳು ಮುರಿದುಬಿದ್ದು ಪರಿಸರದಲ್ಲಿ ವಿದ್ಯುತ್ ಪೂರೈಕೆ ಅಸ್ತವ್ಯಸ್ತವಾಯಿತು.

ನಾರಾವಿಯ ಮರೋಡಿ ರಸ್ತೆಯಲ್ಲಿ 25 ಕೆವಿ ಸಾಮರ್ಥದ ಧರಾಶಾಯಿಯಾಯಿತು.

ಪರಿವರ್ತಕ ಪರಿವರ್ತಕ ಅಳವಡಿಸಿದ್ದ ಕಂಬಗಳು ಮುರಿದುಬಿದ್ದವು. ವಿದ್ಯುತ್ ವ್ಯತ್ಯಯ ಉಂಟಾದ ಕಡೆಗಳಲ್ಲಿ ಮೆಸ್ಕಾಂ ಮರು ಸಂಪರ್ಕ ನಿರ್ಮಿಸಿಕೊಡುವ ಕಾಮಗಾರಿ ನಡೆಸಿದೆ.

ಬೆಳ್ತಂಗಡಿಯ ಕುತ್ಯಾರು ರಸ್ತೆಯಲ್ಲಿ ಮೇ 15ರಂದು ರಾತ್ರಿ ವಿದ್ಯುತ್ ಲೈನ್ ಮೇಲೆ ಮರ ಬಿದ್ದಿದೆ. ಅದೃಷ್ಟವಶಾತ್ ಮರ ಬೀಳುವ ವೇಳೆ ಜನ್ಮ ವಾಹನ ಸಂಚಾರ ಇಲ್ಲದ ಕಾರಣ ಯಾವುದೇ ಅಪಾಯ ಉಂಟಾಗಿಲ್ಲ. ಮೆಸ್ಕಾಂ ಸಿಬ್ಬಂದಿ ಮರ ತೆರೆವುಗೊಳಿಸಿ ವಿದ್ಯುತ್ ಪೂರೈಕೆಗೆ ಸಹಕರಿಸಿದರು. ಮೇ 15ರಂದು ಸಂಜೆಯ ಗಾಳಿ ಮಳೆಗೆ ಕುತ್ಯಾರು ರಸ್ತೆಯಲ್ಲಿ ಕೃಷ್ಣಪ್ಪ ಭಂಡಾರಿ ಅವರ ದನದ ಕೊಟ್ಟಿಗೆಗೆ ಅಡಕೆ ಮರ ಬಿದ್ದು, ಅಪಾರ ಹಾನಿ ಸಂಭವಿಸಿದೆ.

Exit mobile version