ಬೆಳ್ತಂಗಡಿ: ಯಾವುದೋ ವೈಯುಕ್ತಿಕ ಕಾರಣಕ್ಕೆ ಹೊಸಂಗಡಿ ಗ್ರಾಮದ ಕುರ್ಲೊಟ್ಟು ಸುದೆಕಾರ್ ಮನೆ ನಿವಾಸಿ ಅಬೂಬಕ್ಕರ್ (54ವ) ಎಂಬವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುರ್ಲೊಟ್ಟು ಎಂಬಲ್ಲಿ ನಡೆದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಪತ್ನಿ ಹಾಜಿರಾ ಎಂಬವರು ವೇಣೂರು ಪೊಲೀಸರಿಗೆ ದೂರು ನೀಡಿ, ಮೇ16ರಂದು ಮಧ್ಯಾಹ್ನ 12.30ರಿಂದ 4 ಗಂಟೆಯ ಮಧ್ಯೆ ಅವಧಿಯಲ್ಲಿ ಹೊಸಂಗಡಿ ಗ್ರಾಮದ ಕುರ್ಲೊಟ್ಟು ಎಂಬಲ್ಲಿ ತನ್ನ ಯಾವುದೋ ವೈಯಕ್ತಿಕ ಕಾರಣದಿಂದ ಬೀಡಿ ಬ್ರಾಂಚ್ ನ ಕಟ್ಟಡದ ಮಾಡಿನ ಅಡ್ಡಕ್ಕೆ ನೈಲಾನ್ ಹಗ್ಗವನ್ನು ಕಟ್ಟಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತರ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ ಎಂದು ವೇಣೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.