ವೇಣೂರು: ವೇಣೂರು ನವೋದಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿ., ಶಾಖೆಯಲ್ಲಿರುವ ಜಯಶಕ್ತಿ ನವೋದಯ ಸ್ವಸಹಾಯ ಸಂಘದ ಸದಸ್ಯ ದಯಾನಂದ ದೇವಾಡಿಗರವರು ತೋಟದಲ್ಲಿ ಹುಲ್ಲು ಕೊಯ್ದು, ಕೆರೆಯಲ್ಲಿ ಕಾಲು ತೊಳೆಯುವಾಗ ಆಕಸ್ಮಿಕವಾಗಿ ಕೆರೆಗೆ ಜಾರಿ ಬಿದ್ದು ಮರಣ ಹೊಂದಿದ್ದರು.
ಅವರ ಕುಟುಂಬಕ್ಕೆ ಮಂಗಳೂರು ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ನಿಂದ ಮಂಜೂರಾದ ಚೈತನ್ಯ ವಿಮಾ ಮೊತ್ತ ರೂ.1,00,000/ ಚೆಕ್ ನ್ನು ಅವರ ಪತ್ನಿ ಮೋಹಿನಿಯವರಿಗೆ ಶಾಖೆಯ ವ್ಯವಸ್ಥಾಪಕ ನಿತೀಶ್ ಹೆಚ್ ಇವರು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಸಂಘದ ಸದಸ್ಯರು, ಪ್ರೇರಕಿ ಆಶಾಲತಾ ಹಾಗೂ ಶಾಖಾ ಸಿಬ್ಬಂದಿಗಳಾದ ನೀತಾ, ಅಜಿತ್, ಭಾರತಿ ಉಪಸ್ಥಿತರಿದ್ದರು.