ಕೊಕ್ಕಡ: ಕೌಕ್ರಾಡಿ ಸಂತ ಜೋನರ ದೇವಾಲಯ ಧರ್ಮಗುರುಗಳಾದ ಫಾ| ಜಗದೀಶ್ ಲೂಯಿಸ್ ಪಿಂಟೋರವರು 6 ವರ್ಷಗಳ ನಿಸ್ವಾರ್ಥ ಸೇವೆಯನ್ನು ಸಲ್ಲಿಸಿ, ಮಂಗಳೂರು ಧರ್ಮಪ್ರಾಂತ್ಯದ ಖಜಾಂಜಿಯಾಗಿ ವರ್ಗಾವಣೆಯಾಗಲಿರುವುದರಿಂದ ಚರ್ಚ್ ನ ವತಿಯಿಂದ ಮೇ 12ರಂದು ಬೀಳ್ಕೊಡುಗೆ ಸಮಾರಂಭ ಮತ್ತು ಅವರ ಜನ್ಮದಿನದ ಆಚರಣೆಯನ್ನು ನಡೆಸಲಾಯಿತು.
ಸರಳ ಸ್ವಭಾವ ಮತ್ತು ಜನ ಮೆಚ್ಚಿದ ಗುರುಗಳ ಸೇವೆಯನ್ನು ಸ್ಮರಿಸಿ ಅವರಿಗೆ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಫಾ.ಅಶೋಕ್, ಚರ್ಚ್ ಉಪಾಧ್ಯಕ್ಷ ನೋಯೆಲ್ ಪ್ರವೀಣ್ ಮೊಂತೇರೊ, ಕಾರ್ಯದರ್ಶಿ ವೀಣಾ ಮಸ್ಕರೇನ್ಹಸ್, 21 ಆಯೋಗಗಳ ಸಂಚಾಲಕಿ ವಿನ್ನಿಪ್ರೆಡ್ ಡಿಸೋಜ ಮತ್ತು ಧರ್ಮಪ್ರಾಂತ್ಯದ ಸಮಿತಿ ಸದಸ್ಯರಾಗಿರುವ ವಿನ್ಸೆಂಟ್ ಮಿನೇಜಸ್ ರವರು ಉಪಸ್ಥಿತರಿದ್ದರು.