Site icon Suddi Belthangady

ಜೂನ್ 9: ವಿದ್ಯಾಮಾತಾ ಅಕಾಡೆಮಿಯಲ್ಲಿ ಉಚಿತ ಸೇನಾ ತರಬೇತಿ ಪ್ರಾರಂಭ

ಪುತ್ತೂರು: ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರತಿಷ್ಠಿತ ತರಬೇತಿ ಸಂಸ್ಥೆ ವಿದ್ಯಾಮಾತಾ ಅಕಾಡೆಮಿಯಲ್ಲಿ ಕಟ್ಟಡ ನಿರ್ಮಾಣದಲ್ಲಿ ಪ್ರಸಿದ್ದಿ ಪಡೆದಿರುವ ದ್ವಾರಕಾ ಕನ್ಸ್ಟ್ರಕ್ಷನ್ಸ್ ಸಹಭಾಗಿತ್ವದಲ್ಲಿ ಜೂನ್ 9ರಿಂದ ಸೇನಾ ತರಬೇತಿ ತರಗತಿಯೂ ಆರಂಭವಾಗಲಿದೆ.

ಈ ತರಗತಿಯೂ ಪ್ರತಿ ಭಾನುವಾರ ಬೆ. 9:00 ರಿಂದ ಮಧ್ಯಾಹ್ನ 1:00 ರವರೆಗೆ ನಡೆಯಲಿದ್ದು, ಸೇನಾ ನೇಮಕಾತಿಗಳಿಗೆ ಅನ್ವಯವಾಗುವಂತೆ ಲಿಖಿತ ಪರೀಕ್ಷೆ ಮತ್ತು ದೈಹಿಕ ಸದೃಢತೆಯ ತರಬೇತಿಯೂ ಪ್ರಾರಂಭವಾಗಲಿದೆ.

ಭಾರತೀಯ ಸೇನಾ ನೇಮಕಾತಿಗಳು, ರೈಲ್ವೆ ಪೊಲೀಸ್, ಅರೆ ಸಶಸ್ತ್ರ ಮೀಸಲು ಪಡೆ ಸಹಿತ ಎಲ್ಲಾ ರೀತಿಯ ಸಶಸ್ತ್ರ ಪಡೆಗಳ (Armed Forces) ನೇಮಕಾತಿಗಳ ಲಿಖಿತ ಪರೀಕ್ಷೆಗಳು, ದೈಹಿಕ ಸದೃಢತೆಯ ಪರೀಕ್ಷೆಗಳಿಗೆ ಒಂದೇ ಸೂರಿನಡಿ ವಿದ್ಯಾಮಾತಾ ‘ದ್ವಾರಕಾ ಕನ್ಸ್ಟ್ರಕ್ಷನ್ಸ್ ಇದರ ಪ್ರಾಯೋಜಕತ್ವದಲ್ಲಿ ತರಬೇತಿ ನೀಡಲಿದೆ.

ಕಳೆದ 2 ವರ್ಷಗಳಿಂದ 18 ಅಭ್ಯರ್ಥಿಗಳನ್ನು ತರಬೇತಿಗೊಳಿಸಿ ಆಯ್ಕೆಯಾಗಲು ಕಾರಣವಾದ ಸಂಸ್ಥೆ ವಿದ್ಯಾಮಾತಾ ಅಕಾಡೆಮಿಯು ಸೇನೆಗೆ ಅತೀ ಹೆಚ್ಚೂ ಸಂಖ್ಯೆಯಲ್ಲಿ ಯುವ ಜನತೆ ಕರಾವಳಿ ಭಾಗದಿಂದ ಆಯ್ಕೆಯಾಗಬೇಕೆಂಬ ಆಶಯದೊಂದಿಗೆ ತರಗತಿಯನ್ನು ಮುಂದುವರಿಸಿದ್ದು, ಉಚಿತ ತರಬೇತಿಗೆ ಅರ್ಜಿ ಸಲ್ಲಿಸಲು 17ರಿಂದ 23 ವರ್ಷದೊಳಗಿನವರಿಗೆ ಅವಕಾಶ ಇರುತ್ತದೆ.ಸದ್ಯ ಓದುತ್ತಿರುವವರು , ಓದು ಮುಗಿಸಿರುವವರು ಅರ್ಜಿ ಸಲ್ಲಿಸಬಹುದಾಗಿದ್ದು, ತರಬೇತಿಯು ಪುತ್ತೂರು ಮತ್ತು ಸುಳ್ಯ ಕಛೇರಿಯಲ್ಲಿ ನಡೆಯಲಿದ್ದು, ಮೇ.31 ಉಚಿತ ತರಬೇತಿಗೆ ಹೆಸರು ನೋಂದಾವಣೆಗೆ ಕೊನೆ ದಿನ.

ಆಸಕ್ತಿಯುಳ್ಳ ಅಭ್ಯರ್ಥಿಗಳು ಆಧಾರ್ ಮತ್ತು 2 ಪಾಸ್ಪೋರ್ಟ್ ಸೈಜ್ ಫೋಟೋ ನೀಡಿ ಹೆಸರು ನೋಂದಾಯಿಸಿಕೊಳ್ಳಬೇಕು.ಮಾಹಿತಿಗಾಗಿ ಪುತ್ತೂರು ಕಛೇರಿ ದೂರವಾಣಿ ಸಂಖ್ಯೆ 9620468869 , 9148935808 ಮತ್ತು ಸುಳ್ಯ ಶಾಖೆ ದೂರವಾಣಿ ಸಂಖ್ಯೆ : 9448527606 ಸಂಪರ್ಕಿಸಬಹುದು.

Exit mobile version