Site icon Suddi Belthangady

ಫೇಸ್ಬುಕ್ ನಲ್ಲಿ ವಸಂತ ಬಂಗೇರರ ಕುರಿತು ಅವಾಚ್ಯ ಕಮೆಂಟ್- ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು

ಬೆಳ್ತಂಗಡಿ: ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ನಲ್ಲಿ‌ ಮಾಜಿ ಶಾಸಕ ಕೆ.ವಸಂತ ಬಂಗೇರ ಅವರ ಸಾವಿನ ದಿನದಂದು ಸಮಾಜದಲ್ಲಿ ಅಶಾಂತಿ ಹಾಗೂ ಗಲಭೆ ಉಂಟು ಮಾಡಲು ಬಂಗೇರರಿಗೆ ಅವಮಾನ ಮಾಡಿ ಅವಾಚ್ಯ ಕಮೆಂಟ್ ಹಾಕಿರುವ ಉಡುಪಿ ಅಲೆವೂರಿನ ಕುಕ್ಕಿಕಟ್ಟಿ ಇಂದಿರಾನಗರದ ವಿಠಲ ವೆಂಕಟ ಜತ್ತಣ್ಣ ಎಂಬವರ ವಿರುದ್ಧ ಕಾನೂನು‌ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮಿತ್ತಬಾಗಿಲು ಗ್ರಾಮದ ಬನದಬಾಗಿಲು ನಿವಾಸಿ ಸುರೇಂದ್ರ ಬಂಗಾಡಿ ಎಂಬವರು ಬೆಳ್ತಂಗಡಿ ಪೊಲಿಸ್ ಠಾಣೆಗೆ ದೂರು ನೀಡಿದ್ದಾರೆ.

ದಿನಾಂಕ 08.05.2024ನೇ ಬುಧವಾರ ಬೆಳ್ತಂಗಡಿ ತಾಲೂಕಿನ ಮಾಜಿ ಶಾಸಕ ಕೆ. ವಸಂತ ಬಂಗೇರರವರು ಅಲ್ಪ ಕಾಲದ ಅಸೌಖ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನ ಹೊಂದಿದ್ದರು. ಈ ಸಂದರ್ಭದಲ್ಲಿ ಜಾತಿ, ಧರ್ಮ, ಮತ, ರಾಜಕೀಯ ರಹಿತವಾಗಿ ಸಮಾಜದ ಎಲ್ಲಾ ವರ್ಗಗಳ ಬಂಧುಗಳು ಐದು ಬಾರಿ ಶಾಸಕರಾಗಿ ಭ್ರಷ್ಟಾಚಾರ ರಹಿತ, ಪಾರದರ್ಶಕ ಆಡಳಿತ ಮಾಡಿದ್ದ ಕೆ.ವಸಂತ ಬಂಗೇರ ಇವರ ಸಾವಿಗೆ ಕಂಬನಿ ಮಿಡಿದು ಇವರ ಒಳೊಳ್ಳೆಯ ಕೆಲಸಗಳ ಬಗ್ಗೆ ಗುಣಗಾನವನ್ನು ವಿವಿಧ ರೀತಿಯ ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದರು.

ಆದರೆ ಇದೇ ಸಂದರ್ಭದಲ್ಲಿ ದಿನಾಂಕ 08-05-2024ನೇ ಬುಧವಾರ ರಾತ್ರಿ ಸುಮಾರು 08.00 ಗಂಟೆಯ ಸಮಯದಲ್ಲಿ ರಾಜಕೀಯ ದುರುದ್ದೇಶದಿಂದ ಹಾಗೂ ಸಮಾಜದಲ್ಲಿ ಅಶಾಂತಿ, ಗಲಭೆ ನಿರ್ಮಿಸಲು ಫೇಸ್ಟುಕ್ ಸಾಮಾಜಿಕ ಜಾಲತಾಣದಲ್ಲಿ Pavan Kumar ಎಂಬ ವ್ಯಕ್ತಿಯ ಪೋಸ್ಟ್‌ಗೆ Vittal Jathan ಎಂಬ ಉಡುಪಿ ಭಾಗದ ವ್ಯಕ್ತಿ ವಸಂತ ಬಂಗೇರರ ಸಾವಿಗೆ ಅವಾಚ್ಯ ಕಾಮೆಂಟ್ ಹಾಕಿದ್ದಾರೆ.

ಬೆಳ್ತಂಗಡಿ ತಾಲೂಕಿನಲ್ಲಿ ಅಲ್ಲದೆ ಇಡೀ ರಾಜ್ಯದಲ್ಲೇ ಸರ್ಕಾರದ ಮುಖ್ಯ ಸಚೇತಕರಾಗಿ ಭ್ರಷ್ಟಾಚಾರ ರಹಿತ, ಪಾರದರ್ಶಕ ಆಡಳಿತ ನೀಡಿದ ವಸಂತ ಬಂಗೇರರಿಗೆ ಅವರ ಸಾವಿನ ದಿನದಂದು ಸಮಾಜದಲ್ಲಿ ಅಶಾಂತಿ, ಗಲಭೆ ನಿರ್ಮಾಣ ಮಾಡಲು ಉದ್ದೇಶಪೂರ್ವಕವಾಗಿ ಕಾಮೆಂಟ್ ಹಾಕಿದ್ದಾನೆ.

ಈ ಬಗ್ಗೆ Vittal Jathan ಎನ್ನುವ ಅವನದ್ದೇ ಫೇಸ್ಟುಕ್ ಪುಟದಲ್ಲಿ ಅವನ ಮೊಬೈಲ್ ಸಂಖ್ಯೆ ಗಮನಿಸಿದ ನಾನು ಕರೆ ಮಾಡಿದಾಗ ಆ ಕಡೆಯಿಂದ ಹೌದು ನಾನು ವಿಠಲ್ ಜತ್ತನ್ ನಾನೇ ಕಾಮೆಂಟ್ ಹಾಕಿರೋದು. ಬೇಕಾದರೆ ನೀವು ಹಾಕಿ ಅದರಲ್ಲೇ ಉತ್ತರ ಕೊಡಿ ಎಂದು ಮತ್ತಷ್ಟು ಅಸಹನೆ ಹೆಚ್ಚಿಸಲು ಸಮಾಜದಲ್ಲಿ ಗೊಂದಲ ನಿರ್ಮಾಣ ಮಾಡಿ ರಾಜಕೀಯ ದುರುದ್ದೇಶದಿಂದ ವಸಂತ ಬಂಗೇರರ ಗೌರವಕ್ಕೆ ಚ್ಯುತಿ ಬರುವಂತೆ ಹಾಗೂ ಸಮಾಜದಲ್ಲಿ ಬಂಗೇರರ ಹೆಸರನ್ನು ಹಾಳು ಮಾಡುವ ಉದ್ದೇಶ ಹೊಂದಿ ಮಾತನಾಡಿರುತ್ತಾನೆ. ಬೆಳ್ತಂಗಡಿ ತಾಲೂಕಿನ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆಯನ್ನು ನೀಡಿದ, ಭ್ರಷ್ಟಾಚಾರ ರಹಿತ ಪಾರದರ್ಶಕ ಆಡಳಿತ ನೀಡಿದ ವಸಂತ ಬಂಗೇರರ ಕುರಿತು ಈ ತರಹದ ಸುಳ್ಳು ಆಪಾದನೆ, ಸಮಾಜದಲ್ಲಿ ಅಶಾಂತಿ ಗಲಭೆ ನಿರ್ಮಿಸಲು ಹೊಂಚು ಹಾಕಿರುವ ವಿಠಲ್ ಜತ್ತನ್ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ವಿನಂತಿಸಲಾಗಿದೆ.

Exit mobile version