ಕಾಯರ್ತಡ್ಕ: 2023-24ನೇ ಸಾಲಿನ ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ಕಾಯರ್ತಡ್ಕ ಸರಕಾರಿ ಪ್ರೌಢಶಾಲೆಗೆ ಶೇ.97.3 ಫಲಿತಾಂಶವನ್ನು ದಾಖಲಿಸಿರುತ್ತದೆ.
ಪರೀಕ್ಷೆಗೆ ಹಾಜರಾಗಿದ್ದ 38 ಮಂದಿ ವಿದ್ಯಾರ್ಥಿಗಳಲ್ಲಿ 37 ಮಂದಿ ಉತ್ತೀರ್ಣಗೊಂಡಿದ್ದಾರೆ.
ಮೇಘನಾ 603 ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಪಡೆದಿದ್ದರೆ, ಜಗದೀಶ್ ಕುಮಾರ್ 582 ಹಾಗೂ ದೀಪಕ್ ಬಿ 575 ಅಂಕಗಳನ್ನು ಗಳಿಸಿರುತ್ತಾರೆ.
3 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 28 ಮಂದಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣಗೊಂಡಿರುತ್ತಾರೆ. ರಾಜ್ಯದಾದ್ಯಂತ ಗ್ರೇಸ್ ಅಂಕಗಳು ನೀಡಲಾಗಿದ್ದರೂ, ಸರಕಾರಿ ಪ್ರೌಢಶಾಲೆಯ ಎಲ್ಲಾ ವಿದ್ಯಾರ್ಥಿಗಳು ಗ್ರೇಸ್ ಅಂಕಗಳ ಸಹಾಯವಿಲ್ಲದೆ ಉತ್ತೀರ್ಣಗೊಂಡದ್ದು ಪೋಷಕರ ಮೆಚ್ಚುಗೆಗೆ ಪಾತ್ರವಾಗಿದೆ.
ಶಾಲೆಯು ಗುಣಮಟ್ಟದ ಫಲಿತಾಂಶದಲ್ಲಿ 83.66 ಶೇಕಡಾ ಅಂಕ ಪಡೆದಿದ್ದು ‘ಎ’ ಶ್ರೇಣಿಯನ್ನು ಪಡೆದಿರುತ್ತದೆ.