Site icon Suddi Belthangady

ಶೈಕ್ಷಣಿಕ ಪರಿವರ್ತನೆಯ ಕಾಜೂರನ್ನು ನಾವು ನೋಡುತ್ತಿದ್ದೇವೆ: ಶಾಹುಲ್ ಹಮೀದ್

ಬೆಳ್ತಂಗಡಿ: ಕಾಜೂರು ಕ್ಷೇತ್ರ ಇಂದು ಲೌಖಿಕ ಶಿಕ್ಷಣದೊಂದಿಗೆ ಧಾರ್ಮಿಕ ಶಿಕ್ಷಣವನ್ನೂ ಬೆರೆತುಕೊಂಡು ಅಭಿವೃದ್ಧಿ ಮತ್ತು ಪರಿವರ್ತಿತ ಕಾಜೂರನ್ನು ನಾವು ನೋಡುತ್ತಿದ್ದೇವೆ. ಈ ಪ್ರಗತಿಯ ನಡೆ ಇನ್ನಷ್ಟು ವೇಗ ಪಡೆಯಲಿ ಎಂದು ದ.ಕ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಕೆ.ಕೆ ಶಾಹುಲ್ ಹಮೀದ್ ಹೇಳಿದರು.

ಕಾಜೂರು ಉರೂಸಿನ ಪ್ರಯುಕ್ತ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಅವರು ಗೌರವ ಸ್ವೀಕರಿಸಿ ಮಾತನಾಡುತ್ತಿದ್ದರು.

ಅಧ್ಯಕ್ಷತೆಯನ್ನು ಉರೂಸ್ ಸಮಿತಿ ಅಧ್ಯಕ್ಷ ಕೆ.ಯು ಇಬ್ರಾಹಿಂ ವಹಿಸಿದ್ದರು. ಸಯ್ಯಿದ್ ಕಾಜೂರು ತಂಙಳ್, ಜಿಲ್ಲಾ ಆರೋಗ್ಯ ರಕ್ಷಾ ಸಮಿತಿ ಸದಸ್ಯ ಅಬ್ದುಲ್ ಕರಿಂ ಗೇರುಕಟ್ಟೆ, ತಾಲೂಕು ಅಕ್ರಮ ಸಕ್ರಮ ಸಮತಿ ಸದಸ್ಯ ಡಿ.ಕೆ ಅಯ್ಯೂಬ್, ಕಳಿಯ ಗ್ರಾ.ಪಂ ಸದಸ್ಯ ಲೆತೀಫ್ ಪರಿಮ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಮುಹಮ್ಮದ್ ರಫಿ, ಮೊದಲಾದವರು ಅತಿಥಿಗಳಾಗಿದ್ದರು.

ಖ್ಯಾತ ವಾಗ್ಮಿ ಹಂಝ ಮಿಸ್ಬಾಹಿ ವಾಟೆಪ್ಪದವು ಧಾರ್ಮಿಕ ಉಪನ್ಯಾಸ ನಡೆಸಿಕೊಟ್ಟರು.

ಉರೂಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಜೆ.ಹೆಚ್ ಅಬೂಬಕ್ಕರ್ ಸಿದ್ದೀಕ್ ಕಾಜೂರು, ಜೊತೆ ಕಾರ್ಯದರ್ಶಿ ಶಾಹುಲ್ ಹಮೀದ್, ಕೋಶಾಧಿಕಾರಿ ಕೆ‌.ಎಮ್ ಕಮಾಲ್ ಕಾಜೂರು ಉಪಸ್ಥಿತರಿದ್ದರು.

ಉರೂಸ್ ಸಮಿತಿ ಉಪಾಧ್ಯಕ್ಷ ಅಬ್ದುಲ್ ಅಝೀಝ್ ಝುಹುರಿ ಸ್ವಾಗತಿಸಿದರು.

ಕಾರ್ಯಕ್ರಮ ದಲ್ಲಿ ಶಾಹುಲ್ ಹಮೀದ್ ಸಹಿತ ಗಣ್ಯರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.

Exit mobile version