ಬೆಳ್ತಂಗಡಿ: ಮೇ 9ರಂದು ಬೆಳ್ತಂಗಡಿಯ ಮಾಜಿ ಶಾಸಕ ಕೆ. ವಸಂತ ಬಂಗೇರರ ಅಂತಿಮ ವಿಧಿ ವಿಧಾನ ಕಾರ್ಯಕ್ರಮವನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಸಲು ಅನುವು ಮಾಡಿಕೊಟ್ಟ ಕರ್ನಾಟಕ ಸರಕಾರಕ್ಕೆ, ಮತ್ತು ಸಹಕರಿಸಿದ ಮಹನೀಯರಿಗೆ ವಸಂತ ಬಂಗೇರರ ಪತ್ನಿ ಸುಜೀತಾ ಬಂಗೇರ ಮತ್ತು ಕುಟುಂಬಸ್ಥರು ಕೃತಜ್ಞತೆ ಸಲ್ಲಿಸಿದ್ದಾರೆ.
ಕರ್ನಾಟಕ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರವರಿಗೆ, ದೂರವಾಣಿ ಕರೆ ಮಾಡಿ ಸ್ಥೆರ್ಯ ತುಂಬಿದ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ರವರಿಗೆ, ಅಂತಿಮ ದರ್ಶನಗೈದ ಸಂಸದರು, ಶಾಸಕರು, ವಿಧಾನ ಪರಿಷತ್ ಶಾಸಕರುಗಳು, ಮಾಜಿ ಸಚಿವರುಗಳು, ಮಾಜಿ ಶಾಸಕರುಗಳು, ವಿಧಾನ ಪರಿಷತ್ ಮಾಜಿ ಶಾಸಕರುಗಳು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು, ಸರ್ವ ಧರ್ಮದ ಧರ್ಮಗುರುಗಳಿಗೆ, ಪತ್ರಿಕೆ ಹಾಗೂ ದೃಶ್ಯ ಮಾಧ್ಯಮದ ಪ್ರತಿನಿಧಿಗಳಿಗೆ, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳಿಗೆ, ವಿವಿಧ ರಾಜಕೀಯ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ, ಅಭಿಮಾನಿಗಳಿಗೆ, ವಿವಿಧ ಇಲಾಖಾಧಿಕಾರಿಗಳಿಗೆ, ವಿವಿಧ ಇಲಾಖೆಯ ನಿವೃತ ಅಧಿಕಾರಿಗಳಿಗೆ, ಬೆಳ್ತಂಗಡಿ, ಗುರುವಾಯನಕೆರೆ ಮತ್ತು ಮದ್ದಡ್ಕ ಪೇಟೆಯ ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಗೌರವ ಸೂಚಿಸಿದ ವರ್ತಕ ಬಂಧುಗಳಿಗೆ ,ಅಂತಿಮ ದರ್ಶನದ ಸಕಲ ವ್ಯವಸ್ಥೆಗಳ ಉಸ್ತುವಾರಿ ವಹಿಸಿ ನಿರ್ವಹಿಸಿದ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಎಲ್ಲಾ ಪದಾಧಿಕಾರಿಗಳಿಗೆ, ವಿಶೇಷವಾಗಿ ಅಚ್ಚುಕಟ್ಟಾಗಿ ಬಂದೋಬಸ್ತ್ ಕಾರ್ಯ ನಿರ್ವಹಿಸಿದ ಬೆಳ್ತಂಗಡಿಯ ವೃತ್ತ ನಿರೀಕ್ಷಕರು ಮತ್ತು ಸಿಬ್ಬಂದಿಗಳಿಗೆ, ಅಂತಿಮ ವಿಧಿ ವಿಧಾನ ನಿರ್ವಹಿಸಲು ಸಹಕರಿಸಿದ ಕುಟುಂಬ ವರ್ಗದವರಿಗೆ, ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ದುಡಿದ ಎಲ್ಲಾ ಅಭಿಮಾನಿಗಳಿಗೆ ಪತ್ನಿ ಸುಜಿತಾ ವಿ. ಬಂಗೇರ, ಧರ್ಮ ವಿಜೇತ್ ಮತ್ತು ಪ್ರೀತಿತಾ ಬಂಗೇರ, ಸಂಜೀವ್ ಕನೇಕಲ್ ಮತ್ತು ಬಿನುತಾ ಬಂಗೇರ ಮತ್ತು ಮೊಮ್ಮಕ್ಕಳು ಕೃತಜ್ಞತೆ ಸಲ್ಲಿಸಿದ್ದಾರೆ.