Site icon Suddi Belthangady

ಮಾಜಿ ಶಾಸಕ ಕೆ.ವಸಂತ ಬಂಗೇರ ನಿಧನಕ್ಕೆ ಬೆಳ್ತಂಗಡಿ ಧರ್ಮಪ್ರಾಂತ್ಯ ಕೆಎಸ್ಎಂಸಿಎ ಕೇಂದ್ರ ಸಮಿತಿ ಸಂತಾಪ

ಬೆಳ್ತಂಗಡಿ: ದ.ಕ.ಜಿಲ್ಲೆಯ ಹಿರಿಯ ಕಾಂಗ್ರೆಸ್ ಮುಖಂಡ, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ.ವಸಂತ ಬಂಗೇರ ಅವರ ನಿಧನಕ್ಕೆ ಬೆಳ್ತಂಗಡಿ ಧರ್ಮ ಪ್ರಾಂತ್ಯ ಕೆಎಸ್ಎಂಸಿಎ ಕೇಂದ್ರ ಸಮಿತಿ ತೀವ್ರ ಸಂತಾಪ ಸೂಚಿಸಿದೆ.

ಮೂರು ದಶಕಗಳ ಕಾಲ ಶಾಸಕರಾಗಿ ಸೇವೆ ಸಲ್ಲಿಸಿರುವ ವಸಂತ ಬಂಗೇರ ಅವರು ಕರಾವಳಿ ಭಾಗದ ಓರ್ವ ನೇರ ನುಡಿಯ ನಿಷ್ಠಾವಂತ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದರು.

ಕ್ರೈಸ್ತ ಸಮಾಜದ ಪರ ಅಗಾದ ಪ್ರೀತಿ ಗೌರವ ಇಟ್ಟುಕೊಂಡಿದ್ಧ ನಮ್ಮ ಸಮಾಜಕ್ಕಾಗಿ ಅನೇಕ ಸಹಾಯಗಳನ್ನು ಮಾಡಿ ಕ್ರೈಸ್ತರ ಮನವನ್ನು ಗೆದ್ವರಾಗಿದ್ದರು.ರಾಜ್ಯದ ಭ್ರಷ್ಟಾಚಾರ ರಹಿತ ನಾಯಕರಾಗಿದ್ದ ಅವರ ಸಾರ್ಥಕ ಬದುಕು ಆದರ್ಶಪ್ರಾಯ. ಅವರ ಅಗಲಿಕೆ ಕ್ರೈಸ್ತ ಸಮಾಜಕ್ಕೆ ತುಂಬಲಾರದ ನಷ್ಟ.

ಅವರ ಆತ್ಮಕ್ಕೆ ಸೃಷ್ಟಿಕರ್ತರು ಚಿರಶಾಂತಿ ನೀಡಲಿ ಹಾಗೂ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಕೆಎಸ್ಎಂಸಿಎ ಕೇಂದ್ರ ಸಮಿತಿ ಅಧ್ಯಕ್ಷ ಬಿಟ್ಟಿ ನೆಡುನಿಲಂ, ನಿರ್ದೇಶಕ ರೆ.ಫಾ.ಶಾಜಿ ಮಾತ್ಯು, ಪ್ರಧಾನ ಕಾರ್ಯದರ್ಶಿ ಸೆಬಸ್ಟಿಯನ್ ಮಲಯಾತ್ತಿಲ್, ಪಿ ಆರ್ ಓ ಸೆಬಸ್ಟಿಯನ್ ಪಿ ಸಿ ಹಾಗೂ ಕೇಂದ್ರ ಸಮಿತಿ ಸದಸ್ಯರಿಂದ ಸಂತಾಪ ವ್ಯಕ್ತಪಡಿಸಿದರು.

Exit mobile version