Site icon Suddi Belthangady

ಮಾಜಿ ಶಾಸಕ ಕೆ.ವಸಂತ ಬಂಗೇರ ನಿಧನಕ್ಕೆ ಬೆಳ್ತಂಗಡಿ ತಾಲೂಕು ಮಾಜಿ ಸೈನಿಕರ ಸಂಘ ಸಂತಾಪ

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ರಾಜಕಾರಣದಲ್ಲಿ ವಿಶಿಷ್ಟ ಛಾಪನ್ನು ಮೂಡಿಸಿದ್ದ ರಾಜಕಾರಣಿ, ನೇರ ನಡೆನುಡಿಯ ರಾಜ್ಯ ಕಂಡ ಧೀಮಂತ ನಾಯಕ, ಎಲ್ಲಾ ಶೋಷಿತ ವರ್ಗದ ಆಶಾಕಿರಣ, ಶಿಕ್ಷಣ ಪ್ರೇಮಿ, ಧಾರ್ಮಿಕ ಮುಂದಾಳು, ಐದು ಬಾರಿ ತಾಲೂಕಿನ ಜನ ಮೆಚ್ಚಿದ ಶಾಸಕರಾಗಿ, ಕರ್ನಾಟಕ ಘನ ಸರಕಾರದ ಮುಖ್ಯ ಸಚೇತಕರಾಗಿ ಹಾಗೂ ಸಣ್ಣ ಕೈಗಾರಿಕ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ನಮ್ಮ ನೆಚ್ಚಿನ ನಾಯಕರೂ ಹಿರಿಯರೂ ಮಾಜಿ ಶಾಸಕರಾದ ವಸಂತ ಬಂಗೇರ ನಮ್ಮನ್ನಗಲಿದ್ದು, ಮಾಜಿ ಸೈನಿಕರ ಸಂಘ (ನೋ) ಬೆಳ್ತಂಗಡಿ ತಾಲೂಕು ತೀವ್ರ ಸಂತಾಪ ವ್ಯಕ್ತಪಡಿಸುತ್ತದೆ.

ಮೃತರ ಆತ್ಮಕ್ಕೆ ಶಾಂತಿ ಕೋರುತ್ತಾ, ಅವರ ಕುಟುಂಬ ವರ್ಗದವರಿಗೆ, ಅಭಿಮಾನಿಗಳಿಗೆ ಅವರ ಆಗಲುವಿಕೆಯ ನೋವನ್ನು ಹಾಗೂ ಸಹಿಸಲಾರದ ನಷ್ಟವನ್ನು,ಸಹಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಸಂತಾಪ ಸೂಚಿಸಿದರು.

Exit mobile version