Site icon Suddi Belthangady

ಬೆಳ್ತಂಗಡಿಯ ಮಾಜಿ ಶಾಸಕ ಕೆ.ವಸಂತ ಬಂಗೇರ ನಿಧನಕ್ಕೆ ವಿಜಯೇಂದ್ರ ಯಡಿಯೂರಪ್ಪರಿಂದ ಸಂತಾಪ

ಬೆಳ್ತಂಗಡಿ: ಮಾಜಿ ಶಾಸಕ ಕೆ.ವಸಂತ ಬಂಗೇರ ಅವರ ನಿಧನಕ್ಕೆ ಸಂತಾಪ ಕೋರುವೆ.

ಆರಂಭಿಕ ದಿನಗಳಲ್ಲಿ ಕರ್ನಾಟಕದ ಭಾರತೀಯ ಜನತಾ ಪಾರ್ಟಿಯ ಬೆಳವಣಿಗೆಗೆ ಹೆಗಲು ಕೊಟ್ಟಿದ್ದ ನೇರ ನುಡಿಗೆ ಹೆಸರಾಗಿದ್ದ ಬಂಗೇರ ಅವರ ನಿಧನದಿಂದಾಗಿ ಒಬ್ಬ ಪ್ರಾಮಾಣಿಕ ಜನನಾಯಕನನ್ನು ಕಳೆದುಕೊಂಡಂತಾಗಿದೆ.

ಅವರ ಆತ್ಮಕ್ಕೆ ಸದ್ಗತಿ ಕೋರುತ್ತಾ, ಅವರ ಕುಟುಂಬ ವರ್ಗದವರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲೆಂದು ಪ್ರಾರ್ಥಿಸುವೆ.

Exit mobile version