Site icon Suddi Belthangady

ಮಾಜಿ‌ ಶಾಸಕ ಕೆ.ವಸಂತ ಬಂಗೇರರ ನಿಧನಕ್ಕೆ ಭಾರತೀಯ ಮಾಜ್ದೂರು ಸಂಘದ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ರವರಿಂದ ಸಂತಾಪ

ಬೆಳ್ತಂಗಡಿ: ರಾಜ್ಯ ರಾಜಕೀಯದ ಹಿರಿಯ ಮುತ್ಸದ್ದಿ, ದಕ್ಷಿಣ ಕನ್ನಡದ ಅಜಾತಶತ್ರು, ಬೆಳ್ತಂಗಡಿ ತಾಲೂಕಿನ ಅಭಿವೃದ್ಧಿಗೆ ಅಡಿಪಾಯ ಹಾಕಿದ, ಹಲವು ಮಹತ್ತರ ಯೋಜನೆಗಳನ್ನು ತಂದ, ರಾಜಕಾರಣದಲ್ಲಿ ಮಾದರಿ ವ್ಯಕ್ತಿಯಾಗಿ ಬೆಳೆದು, ಮುಂದಿನ ಯುವ ರಾಜಕಾರಣಿಗಳಿಗೆ ಸ್ಫೂರ್ತಿಯ ಚಿಲುಮೆಯಾಗಿ, ಪ್ರೇರಣಾದಾಯಿಯಾಗಿ, ಆದರ್ಶಪ್ರಾಯಾರಾಗಿ, ನಿಲ್ಲಬಲ್ಲ ನೇರ ನಡೆ ನುಡಿಯ, ಪ್ರಾಮಾಣಿಕ, ಪ್ರಖರ ಮಾತಿನ ಮಲ್ಲ, ಬೆಳ್ತಂಗಡಿಯ ಗಂಡೆದೆಯ ನಾಯಕರಾಗಿದ್ದ ಹಿರಿಯರಾದ ಕೆ.ವಸಂತ ಬಂಗೇರ ನಿಧನದ ಸುದ್ದಿ ಅತೀವ ನೋವು ತಂದಿದೆ.

ಬೆಳ್ತಂಗಡಿ ತಾಲೂಕಿಗೆ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ಅವರ ಕೊಡುಗೆ ಅಪಾರ.

ಸದಾ ಕ್ರೀಯಾಶೀಲರಾಗಿದ್ದ ಅವರ ನಿಧನ ಬೆಳ್ತಂಗಡಿಗೆ ತುಂಬಲಾರದ ನಷ್ಟ. ಹಿರಿಯರ ಆತ್ಮಕ್ಕೆ ದೇವರು ಸದ್ಗತಿ ಕರುಣಿಸಲಿ ಮತ್ತು ಕುಟುಂಬ ವರ್ಗ, ಬಂಧು ಮಿತ್ರರು, ಹಿತೈಷಿಗಳಿಗೆ ನೋವನ್ನು ಸಹಿಸುವ ಶಕ್ತಿ ನೀಡಲಿ ಎಂದು ಭಾರತೀಯ ಮಾಜ್ದೂರು ಸಂಘ ದಕ ಜಿಲ್ಲಾಧ್ಯಕ್ಷ,ನ್ಯಾಯವಾದಿ ಅನಿಲ್ ಕುಮಾರ್ ಯು ಸಂತಾಪ ಸೂಚಿಸಿದ್ದಾರೆ.

Exit mobile version