Site icon Suddi Belthangady

ಮೇ.13-21: ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ

ಶಿಶಿಲ: ಶಿಶಿಲ ಗ್ರಾಮದ ಶ್ರೀ ಶಿಶಿಲೇಶ್ವರ ಸನ್ನಿಧಿಯಲ್ಲಿ ಮೇ.13ರಂದು ರಾತ್ರಿ ಧ್ವಜಾರೋಹಣವಾಗಿ ಮೇ.21ರಂದು ತನಕ ದೇವರ ಉತ್ಸವಗಳು ಕೆಮ್ಮಿಂಜೆ ಬ್ರಹ್ಮಶ್ರೀ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವವು ಜರಗಲಿರುವುದು.

ಉತ್ಸವ ಮತ್ತು ಧಾರ್ಮಿಕ ಕಾರ್ಯಕ್ರಮಗಳು ಮೇ.1ರಂದು ಗೊನೆ ಕಡಿಯುವುದು, ಮೇ.13ರ ರಾತ್ರಿ ವಾಸ್ತು ಬಲಿ, ವಾಸ್ತು ರಕ್ಷೆಘ್ನ ಹೋಮ, ವಾಸ್ತು ಪೂಜೆ, ಕಿಲಮರಿತ್ತಾಯ ನೇಮ, ಧ್ವಜಾರೋಹಣ, ಮೇ.14ರಂದು ಪೂರ್ವಾಹ್ನ ಪುಣ್ಯಾಹ, ಶಾಂತಿ ಹವನಗಳು, 12ಕಾಯಿ ಗಣಯಾಗ ರಾತ್ರಿ ಜೋಡು ನೇಮ, ಕುದುರೆಮುಖ ದೈವದ ನೇಮ, ಉಗ್ರಾಣ ತುಂಬಿಸುವುದು, ಅಂಕುರಾರ್ಪಣೆ, ದೇವರ ಉತ್ಸವ ಪ್ರಾರಂಭ, ಅಶ್ವತ್ಥಕಟ್ಟೆ ಪೂಜೆ, ಮೇ.15ರಮದು ಪೂರ್ವಾಹ್ನ ಅಂಗಣೋತ್ಸವ ರಾತ್ರಿ ದೇವರ ಉತ್ಸವ, ಬೆಳ್ಳಿಕಟ್ಟೆ ಪೂಜೆ, ಮೇ.16ರಂದು ಪೂರ್ವಾಹ್ನ ಅಂಗಣೋತ್ಸವ ರಾತ್ರಿ ಉತ್ಸವ, ಸವಾರಿ ಮಂಟಪ ಕಟ್ಟೆ ಪೂಜೆ, ಮೇ.17ರಂದು ಪೂರ್ವಾಹ್ನ ಅಂಗಣೋತ್ಸವ “ದೇವರ ದರ್ಶನ ಬಲಿ”, ಬಟ್ಟಲು ಕಾಣಿಕೆ ರಾತ್ರಿ ಅಂಗಣೋತ್ಸವ, ಬಂಗರಕಟ್ಟೆ ಪೂಜೆ ರಾತ್ರಿ 11ರಿಂದ ಬೆಳಗಿನ ತನಕ ತುಳು ಯಕ್ಷಗಾನ, ಮೇ.18ರಂದು ಪೂರ್ವಾಹ್ನ ಅಂಗಣೋತ್ಸವ ರಾತ್ರಿ “ಮಹಾ ರಥೋತ್ಸವ”, ಕವಾಟ ಬಂಧನ, ಮೇ.19ರಂದು ಪೂರ್ವಾಹ್ನ ಕವಾಟೋದ್ಘಾಟನೆ, ಮಹಾಪೂಜೆ, ಸಂಜೆ ತೆಪ್ಪೋತ್ಸವ, ಕಟ್ಟೆಪೂಜೆ, ವಸಂತ ಕಟ್ಟೆಯಲ್ಲಿ ಓಕುಳಿ, ಮೀನಗುಂಡಿಯಲ್ಲಿ ಅವಕೃತೋತ್ಸವ, ಧ್ವಜ ಅವರೋಹಣ, ಮೇ.20ರಂದು ಪೂರ್ವಾಹ್ನ ಶ್ರೀ ಶಿಶಿಲೇಶ್ವರ ದೇವರ ಮೂಲಸ್ಥಾನ ಕುಮಾರಗುಡ್ಡೆಯಲ್ಲಿ ರುದ್ರಾಭಿಷೇಕ, ಮಹಾಪೂಜೆ, ಕುಮಾರಾದಿ ದೈವಗಳಿಗೆ ನೇಮ, ರಾತ್ರಿ ಗೋಪುರದ ಬಾಗಿಲಲ್ಲಿ ಚಕ್ರವರ್ತಿ ಕೊಡಮಣಿತ್ತಾಯ ಹಾಗೂ ಪರಿವಾರ ದೈವಗಳಿಗೆ ನೇಮ, ವರ್ಷಾವಧಿ ಕಟ್ಟೆಯ ಬಳಿ ದೈವಗಳ ನೇಮ, ಮೇ.21ರಂದು ಪೂರ್ವಾಹ್ನ ಶುದ್ಧ ಕಲಶ ಸಂಪ್ರೋಕ್ಷಣೆ, ಮಹಾಪೂಜೆ, ಪ್ರಸಾದ ವಿತರಣೆ ಕಾರ್ಯಕ್ರಮ ನೆರವೇರಲಿದೆ ಎಂದು ಆಡಳಿತಾಧಿಕಾರಿ ದಿನೇಶ್ ಎಂ ತಿಳಿಸಿದ್ದಾರೆ.

Exit mobile version