ಬೆಳಾಲು: ಬೆಳಾಲು ಗ್ರಾಮದ ಸಾಂತ್ರೊಟ್ಟು ನಿವೃತ್ತ ಶಿಕ್ಷಕ ದಿ.ಸುಬ್ರಾಯ ಕೆರ್ಮುಣ್ಣಾಯರ ಪತ್ನಿ ಸುಲೋಚನಾ ಎಸ್.ಕೆರ್ಮುಣ್ಣಾಯ(77ವರ್ಷ) ಎ.30ರಂದು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಅವರು ಪುತ್ರರಾದ ಉಜಿರೆ ಎಸ್. ಡಿ.ಎಂ.ಅನುದಾನಿತ ಸೆಕೆಂಡರಿ ಶಾಲೆಯ ಶಿಕ್ಷಕ ರಾಧಾಕೃಷ್ಣ ಕೆರ್ಮುನ್ನಾಯ ಮತ್ತು ವೇಣುಗೋಪಾಲ ಕೆರ್ಮುನ್ನಾಯ ಹಾಗೂ ಈರ್ವರು ಪುತ್ರಿಯರು, ಕುಟುಂಬ ವರ್ಗ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.